ಹಾಡಲು ಕಲಿಯಿರಿ(CLICK HERE TO LEARN THIS SONG)
ಗುರುವೇ ಗತಿ ಯೆನ್ನು ಮನವೇ ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ
ಕೇಳ್ ಪೆರತೊಂದು ಘನವೇ|
ಗುರುವೇ ಗತಿ ಯೆನ್ನು ಮನವೇ
ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ
ಕೇಳ್ ಪೆರತೊಂದು ಘನವೇ
ಗುರುವೇ ಗತಿ ಯೆನ್ನು ಮನವೇ||
ಮರೆವೆಯಿ೦ ಮರುಳನಾಗಿರುವೆ |ಮೂಳೆ| ನರ ಮಾಂಸ ತನುವ ತಾನೆ೦ಬುವುದು ತರವೇ ।
ಅರಿಯದೆ ಹಿಂದೆ ನೊಂದಿರುವೆ |ಮುಂದೆ| ಕೊರತೆಯಿಲ್ಲದ ನಿಜಾನಂದದೊಳಿರುವೆ ಆನಂದದೊಳಿರುವೆ
, ಗುರುವೇ ಗತಿ ಯೆನ್ನು ಮನವೇ
||
ಧನ ಧಾನ್ಯ ಬಂಧು ಭಾಗ್ಯಗಳು ।ನಿನ್ನ।
ಘನವ ನೀನರಿಯದ ಮಾಯ ಕಾರ್ಯಗಳು|
ಕೊನೆಗಾಣದಿರುವೊ ದುಃಖಗಳು ।ಅಲ್ಲಿ।
ಮನವಿಟ್ಟ ನರನಿಗೆ ಬಿಡದು ಕೋಳಗಳು |ಕೇಳ್| ಬಿಡದು ಬಂಧುಗಳು
ಗುರುವೇ ಗತಿ ಯೆನ್ನು ಮನವೇ
||
ತನ್ನ ತಾ ತಿಳಿವ ಸಾಹಸವ ।ಬಿಟ್ಟು। ನೀನೆಂದು ದೃಶ್ಯವಾಗುವ ಬೀದಿ ಕಸವ
ಧ್ಯಾನಿಸಿತರು ಓ ಮಾನಸವ
|ಬಿಟ್ಟು| ನೀನೆಯಾದರೆ
ಸೇವಿಸುವೆ ಸಿದ್ದರಸವಾ
ಶ್ರೀ ಗುರು ಸಿದ್ದರಸವಾ
, ಗುರುವೇ ಗತಿ ಯೆನ್ನು ಮನವೇ
||
ಕುರುಹಿಲ್ಲವದು ಶೂನ್ಯವಲ್ಲ ।ನಿತ್ಯ। ನಿರತಿಶಯಾನಂದ ನುಡಿಯೊಳಗಿಲ್ಲ
ಪರವಾದಿ ಇದನೇನ ಬಲ್ಲ |ಅಲ್ಲಿ| ಗುರು ಶಂಕರರ ಬಿಟ್ಟು ಪೆರತೊ೦ಬುವುದಿಲ್ಲ
|ಕೇಳ್|
ಪೆರತೊ೦ಬುವುದಿಲ್ಲ, ಗುರುವೇ ಗತಿ ಯೆನ್ನು ಮನವೇ
||
No comments:
Post a Comment