ಹಾಡಲು ಕಲಿಯಿರಿ(CLICK HERE TO LEARN THIS SONG)
ತೇನ ವಿನಾ ತೇನ ವಿನಾ
ತೃಣಮಪಿ ನ ಚಲತಿ ತೇನ ವಿನಾ.
ಮಮತೆಯ ಬಿಡು, ಹೇ ಮೂಢಮನಾ,
ಮಮತೆಯ ಬಿಡು, ಹೇ ಮೂಢಮನಾ||
ರವಿಗಿಲ್ಲದ ಭಯ, ಶಶಿಗಿಲ್ಲದ ಭಯ,
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು ||1||
ಎಲ್ಲೆಲ್ಲಿಯು ಕೈ, ಎಲ್ಲೆಲ್ಲಿಯು ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ||2||
……………………………………………………………………………..
No comments:
Post a Comment