Dec 22, 2024

ನಾಕು ತಂತಿ (ಡಾ॥ ದ. ರಾ ಬೇಂದ್ರೆ ) SONG LYRICS IN KANNADA | NAAKU THANTHI SONG

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆವು ಈವಿನ  ನಾವು ನೀವಿಗೆ ಆನು ತಾನದ ತನನನಾS

 ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ |

  

ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು--ರಸ್ವನಾ

ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ

ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ- ತಸ್ತನಾ.||

 

ಚಿತ್ತೀಮಳಿ, ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ

ಸತ್ತಿSಯೊ ಮಗನ ಅಂತ ಕೂಗಿದರು

ಸಾವೀ ಮಗಳು, ಭಾವೀ ಮಗಳು ಕೂಡಿ…..|

ಜಗ, ಅಪ್ಪಾ, ಅಮ್ಮನ ಮಗ

ಅಮ್ಮನೊಳಗ ಅಪ್ಪನ ಮೊಗ

ಅಪ್ಪನ ಕತ್ತಿಗೆ ಅಮ್ಮನ ನೊಗ

ನಾ ಅವರ ಕಂದ ಶ್ರೀ ಗುರುದತ್ತ ಅಂದ.||

 

ನಾನು ನೀನು ಆನು ತಾನು ( 4 ಸಲ)

ನಾಕು  ನಾಕೆ ತಂತಿ,


ಸೊಲ್ಲಿಸಿದರು  ನಿಲ್ಲಿಸಿದರು ಓಂ ಓಂ ದಂತಿ

ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ

ಗುರಿಯ ತುಂಬಿ ಕುರಿಯ ಕಣ್ಣು

ಧಾತು ಮಾತು (3 ಸಲ)

ಕೂಡಿ. ………||

 ನಾನು ನೀನು ಆನು ತಾನು ( 4 ಸಲ)

ನಾಕು  ನಾಕೆ ತಂತಿ

 .....................................................................................................................


Dec 20, 2024

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ SONG LYRICS IN KANNADA| ADILAKSHMI DEVIGE SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ

ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ

ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ llPll

 

ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ

ಭಾಗ್ಯದಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ

ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ

ಧನ ಧಾನ್ಯವ ಕೊಟ್ಟುs ಸಂತಾನ ಕರುಣಿಸಮ್ಮ ll1ll

 

ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ

ಕಮಲನಯನೆ ನಿಜ ಕಮಲವದನೆ ಕಮಲಾಕ್ಷ ವಲ್ಲಭೆ ಬಾರೆ

ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ

           ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ll2ll


....................................................................................

Dec 19, 2024

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ SONG LYRICS IN KANNADA| TAVAROORA DAARILI SONG LYRICS| KANNADA FOLK SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ

ಸಾಸಿವೆಯಷ್ಟು ಮರಳಿಲ್ಲ

ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ

ಬಿಸಿಲಿನ ಬೇಗೆ ಸುಡಲಿಲ್ಲ ||

 

ನೀರ ಮೇಲೆ ನೀರು ನೀರಾಚೆ ತಾವರೆ

ತಾವರೆ ಆಚೆ ತವರೂರು |

ತಾವರೆ ಆಚೆ ತವರೂರು ಹೋದರೆ

ತಿರುಗಿ ಬರುವುದಕ್ಕೆ ಮನಸ್ಸಿಲ್ಲ ||1||

 

ಕಣ್ಣಿಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ

ಹೆಣ್ಣು ಮಕ್ಕಳಿಗೆ ತವರಾಸೆ, |

ಹೆಣ್ಣು ಮಕ್ಕಳಿಗೆ ತವರಾಸೆ ತಾಯವ್ವ

ನಿನ್ನಾಸೆ ನಮಗೆ ಅನುಗಾಲ ||2||

 

ಯಾರಾದರೂ ಹೆತ್ತ ತಾಯಂತೆ ಆದಾರೆ

ಸಾವಿರ ಸೌದೆ ಒಲೆಯಲ್ಲಿ |

ಸಾವಿರ ಸೌದೆ ಒಲೆಯಲ್ಲಿ ಉರಿದಾರು

ದೀವಿಗೆಯಂತೆ ಬೆಳಕುಂಟೆ ||3||

 

ಒಬ್ಬರಿರುವ ಮನೆಗೆ ಹಬ್ಬದಿರು ಮಲ್ಲಿಗೆ

ಒಬ್ಬಳೇ ಕೂತು  ಮುಡಿಲಾರೆ |

ಒಬ್ಬಳೇ ಕೂತು  ಮುಡಿಲಾರೆ ಮಲ್ಲಿಗೆ

ಹಬ್ ಹೋಗು ನನ್ನ ತವರಿಗೆ ||4||

 

ತಾಯಿ ನನ ಹಡೆದವ್ವ ಜೀವೆಲ್ಲ ನನ್ನ ಮ್ಯಾಲ

ಕಡಿ ಹಾಕು ರಾಯ ಕುದುರೇಗೆ |

ಕಡಿ ಹಾಕು ರಾಯ ಕುದುರೇಗೆ ಸಂಗಾತ

ಆಳಾಕಳು ಅರಸ ಐನೋರು ||5||

...............................................................

 


Dec 16, 2024

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ MALE VERSION (ಸಿಂಧೂರ ತಿಲಕ) SONG LYRICS IN KANNADA |KANNADA SAVIGANA|FILM SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೆ ಸಂತಸ ಇರಲು 
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ 
ನೋವಿನ ಬಾಳಿಗೆ ಧೈರ್ಯವೇ ಗೆಳೆಯ
ಪ್ರೇಮದ ಜೋಡಿಗೆ ಆಗದು ಪ್ರಳಯ ||ಒಂದೇ||

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟುಹಾಕೋ ಬೆಂಕಿಯೇ ತನ್ನ ತಾನೆ ಸುಟ್ಟರೆ
ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿಯಿಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ ||1||

ಮೂಡಣದಿ ಮೂಡಿದ ಸಿಂದೂರವೇ ಆಗಿ ಬಾ
ಜೀವಧಾರೆ ಆಗಿಬಾ ಪ್ರೇಮ ಪುಷ್ಪ ಸೇರುಬಾ
ಬಾನಗಲ ತುಂಬಿ ಆಸೆಗಳ ತುಂಬು ಬಾ
ಸಿಂಗಾರವೇ ತೇಲಿ ಬಾ ಸಂತೋಷವ ನೀಡು ಬಾ
ಪ್ರೆಮದಾಸೆ ನನ್ನ ನಿನ್ನ ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ
ದೇವರ ಗುಡಿಗೂ ವಿಗ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರು ಗಿರಿಯ ನಾ ಹೊರುವೆ ನಿನ್ನಾಣೆ ||2||

………………………………………………………………………………….


Dec 12, 2024

ಪ್ರೀತಿ ಮಾಯೆ ಹುಷಾರು (ದುನಿಯಾ)LYRICS IN KANNADA | KANNADA SAVIGAANA LYRICS|PREETHI MAAYE HUSHAARU

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ||

ರೋಮಿಯೋ ಜೂಲಿಯಟ್ ನಮಗೊತ್ತಿಲ್ವಾ
ಪಾಯಿಸನ್ ಕುಡ್ಸಿದ್ದು ಪ್ರೀತಿ ಅಲ್ವಾ
ಸಾವಲ್ಲೂ ಒ೦ದಾದರು ಪ್ರೀತ್ಸೋರ್ಗೆಲ್ಲಾ ದೇವ್ರಾದರು
ಪ್ರೀತ್ಸೋರಾ ಪಿಸುಮಾತನು ಕೊಲ್ಲೋ ಲೋಕ ಸುಳ್ಳೆ೦ದರು
ಈ ಪ್ರೀತಿ ಕುರುಡು ಕಣೆ ನೋವಲ್ಲೇ ಅದರ ಕೊನೆ
ಯಾಮಾರ್ಬೇಡ ಸುಮ್ಮನೆ ||1||

ದೇವದಾಸ್ ಸ್ಟೋರಿ ಗೊತ್ತಾ ನಿ೦ಗೆ
ಪ್ರೀತ್ಸಿ ಪೀವೊಟ್ ಆಗಿದ್ಹೆ೦ಗೆ
ಪಾರೂನ ಮರೆಯೋ ನೆಪ
ನೆಪವೇ ನೆನಪು ಅವಳ ಜಪ
ಮರೆಯಾದ್ರೂ ಅವರ ಕತೆ
ನೀವ್ ನೆನೆಯೋದ್ ಯಾಕೆ ಮತ್ತೆ ಮತ್ತೇ
ಹೇ ಆದಿ ಪನ್ನೀರೂ ಅ೦ತ್ಯ ಕಣ್ಣೀರೂ
ಕೈ ಕೊಡುವನೋ ದೇವರು ||2||
...........................................


Dec 11, 2024

ಭಗವದ್ಗೀತೆ 12ನೇ ಅಧ್ಯಾಯ: ಭಕ್ತಿಯೋಗ LYRICS IN KANNADA | KANNADA SAVIGANA| BHAGAVADGITHA CHAPTER 12

 ಹಾಡಲು ಕಲಿಯಿರಿ(CLICK HERE TO LEARN THESE SHLOKAS)

ಭಗವದ್ಗೀತೆ 12ನೇ ಅಧ್ಯಾಯ: ಭಕ್ತಿಯೋಗ

 

ಅರ್ಜುನ  ಉವಾಚ:

ಎವ೦ ಸತತ ಯುಕ್ತಾ ಯೇ ಭಕ್ತಾಸ್ತ್ವಾ೦ ಪರ್ಯುಪಾಸತೇ

ಯೇ ಚಾಪ್ಯಕ್ಷರಮವ್ಯಕ್ತ೦ ತೇಷಾ೦ ಕೇ ಯೋಗವಿತ್ತಮಾ:॥೧॥

 

ಶ್ರೀ ಭಗವಾನ್ ಉವಾಚ:

ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ।

ಶ್ರದ್ಧಯಾ ಪರಯೋಪೇತಾ: ತೇ ಮೇ ಯುಕ್ತತಮಾ ಮತಾ: ॥೨॥

 

ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತ೦ ಪರ್ಯುಪಾಸತೇ।

ಸರ್ವತ್ರಗಮಚಿ೦ತ್ಯ೦ ಕೂಟಸ್ಥಮಚಲ೦ ಧ್ರುವಮ್॥೩॥

 

ಸನ್ನಿಯಮ್ಯೇ೦ದ್ರಿಯಗ್ರಾಮ೦ ಸರ್ವತ್ರ ಸಮ ಬುದ್ಧಯ:

ತೇ ಪ್ರಾಪ್ನುವ೦ತಿ ಮಾಮೇವ ಸರ್ವಭೂತಹಿತೇ ರತಾ: ॥೪॥

 

ಕ್ಲೇಶೋsಧಿಕತರಸ್ತೇಷಾ೦ ಅವ್ಯಕ್ತಾಸಕ್ತ ಚೇತಸಾಮ್।

ಅವ್ಯಕ್ತಾ ಹಿ ಗತಿರ್ದು:ಖ೦ ದೇಹವದ್ಭಿರವಾಪ್ಯತೇ॥೫॥

 

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸ0ನ್ಯಸ್ಯ ಮತ್ಪರಾ:

ಅನನ್ಯೇನೈವ ಯೋಗೇನ ಮಾ೦ ಧ್ಯಾಯ೦ತ ಉಪಾಸತೇ॥೬॥

 

ತೇಷಾಮಹ೦ ಸಮುದ್ಧರ್ತಾ ಮೃತ್ಯುಸ೦ಸಾರಸಾಗರಾತ್।

ಭವಾಮಿ ನಚಿರಾತ್ಪಾರ್ಥ: ಮಯ್ಯವೇಶಿತಚೇತಸಾಮ್॥೭॥

 

ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿ೦ ನಿವೇಶಯ।

ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವ೦ ಸ೦ಶಯ:॥೮॥

 

ಅಥ ಚಿತ್ತ೦ ಸಮಾಧಾತು೦ ಶಕ್ನೋಷಿ ಮಯಿ ಸ್ಥಿರಮ್।

ಅಭ್ಯಾಸಯೋಗೇನ ತತೋ ಮಾಮಿಚ್ಚಾಪ್ತು೦ ಧನ೦ಜಯ॥೯॥

 

ಅಭ್ಯಾಸೇsಪ್ಯಸಮರ್ಥೋsಸಿ ಮತ್ಕರ್ಮ ಪರಮೋ ಭವ।

ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ದಿಮವಾಪ್ಸ್ಯಸಿ॥೧೦॥

 

ಅಥೈತದಪ್ಯಶ್ಕ್ತೋsಸಿ ಕರ್ತು೦ ಮದ್ಯೋಗಮಾಶ್ರಿತ:।

ಸರ್ವಕರ್ಮ ಫಲತ್ಯಾಗ೦ ತತ: ಕುರು ಯಥಾತ್ಮವಾನ್॥೧೧॥

 

ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನ೦ ವಿಶಿಷ್ಯತೇ।

ಧ್ಯಾನಾತ್ಕರ್ಮಫಲತ್ಯಾಗ: ತ್ಯಾಗಾತ್ ಶಾ೦ತಿರನ೦ತರಮ್॥೧೨॥

 

ಅದ್ವೇಷ್ಟಾ ಸರ್ವಭೂತಾನಾ೦ ಮೈತ್ರ: ಕರುಣ ಏವ ಚ।

ನಿರ್ಮಮೋ ನಿರಹ೦ಕಾರ: ಸಮದು:ಖಸುಖ ಕ್ಷಮೀ॥೧೩॥

 

ಸ೦ತುಷ್ಟ: ಸತತ೦ ಯೋಗೀ ಯತಾತ್ಮಾ ದೃಢ ನಿಶ್ಚಯ:।

ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತ: ಸ ಮೇ ಪ್ರಿಯ: ॥೧೪॥

 

ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯ:

ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯ: ಸ  ಚ ಮೇ ಪ್ರಿಯ:॥೧೫॥

 

ಅನಪೇಕ್ಷ: ಶುಚಿರ್ದಕ್ಷ ಉದಾಸೀನೋ ಗತವ್ಯಥ: ।

ಸರ್ವಾರ೦ಭ ಪರಿತ್ಯಾಗೀ ಯೋ ಮದ್ಭಕ್ತ: ಸ ಮೇ ಪ್ರಿಯ:॥೧೬॥

 

ಯೋ ನ ಹೃಷ್ಯತಿ ನ ದ್ವೇಷ್ಟೀ ನ ಶೋಚತಿ ನ ಕಾ೦ಕ್ಷತಿ।

ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯ: ಸ ಮೇ ಪ್ರಿಯ: ॥೧೭॥

 

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:।

ಶೀತೋಷ್ಣಸುಖದು:ಖೇಷು ಸಮ: ಸ೦ಗವಿವರ್ಜಿತ:॥೧೮॥

 

ತುಲ್ಯನಿ೦ದಾಸ್ತುತಿರ್ಮೌನೀ ಸ೦ತುಷ್ಟೋ ಯೇನ ಕೇನಚಿತ್।

ಅನಿಕೇತ: ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರ: ॥೧೯॥

 

ಯೇ ತು ಧರ್ಮ್ಯಾಮೃತಮಿದ೦ ಯಥೋಕ್ತ೦ ಪರ್ಯುಪಾಸತೇ।

ಶ್ರದ್ಧಧಾನಾ ಮತ್ಪರಮಾ ಭಕ್ತಾಸ್ತೇsತೀವ ಮೇ ಪ್ರಿಯಾ:॥೨೦॥

 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು  ಬ್ರಹ್ಮವಿದ್ಯಾಯಾ೦ ಯೋಗಶಾಸ್ತ್ರೇ  ಶ್ರೀಕೃಷ್ಣಾರ್ಜುನ ಸಂವಾದೇ ಭಕ್ತಿಯೋಗೋ ನಾಮ ದ್ವಾದಶೋಧ್ಯಾಯಃ ॥

...........................................................................................................................

Dec 10, 2024

ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ (ತುತ್ತಾ ಮುತ್ತಾ ) |LYRICS IN KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 


ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದವನೆ ತತ್ವಜ್ನ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ ||

ಮಗುವು ಅತ್ತರೆ ತಾನತ್ತು ಹಾಲನೆರೆದವಳು ತಾಯಲ್ಲವೆ
ನಮಗಾಗಿ ಜೀವವ ತೇಯ್ದಿಲ್ಲವೆ
ತಾಳಿ ಪಾಶಕೆ ತಲೆ ಕೊಟ್ಟು ಗಂಡಿನರ್ಧವೆ ತಾನಾಗಿ
ಸತಿ ನಮಗೆ ಮೀಸಲೇ ಆಗಿಲ್ಲವೆ|
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ್ಲ ಮಡದಿ ಇಲ್ಲದೆ ಛಲವಿಲ್ಲ
ತುತ್ತ ಮುತ್ತ ಗೊತ್ತ, ಅತ್ತ ಇತ್ತ ಎತ್ತ ||1||

ಕುಂತಿ ಇಲ್ಲದೆ ಪಾಂಡವರೆ ದ್ರೌಪದಿ ಇಲ್ಲದೆ ಭಾರತವೆ
ಗಂಡು ಇಬ್ಬರ ಸ್ವತ್ತಲ್ಲವೆ
ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮ್ಮ ಎರಡು ಕಣ್ಣು ಎರಡು ಹೆಣ್ಣು

ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ
ತುತ್ತ ಮುತ್ತ ಗೊತ್ತ ಅತ್ತ ಇತ್ತ ಎತ್ತ ||2||

ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದವನೆ ತತ್ವಜ್ನ್ಞಾನಿ ಅಂತ ತಿಳಿಬೇಡ
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ ||

…………………………………………………………………………………..