Dec 19, 2024

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ SONG LYRICS IN KANNADA| TAVAROORA DAARILI SONG LYRICS| KANNADA FOLK SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ

ಸಾಸಿವೆಯಷ್ಟು ಮರಳಿಲ್ಲ

ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ

ಬಿಸಿಲಿನ ಬೇಗೆ ಸುಡಲಿಲ್ಲ ||

 

ನೀರ ಮೇಲೆ ನೀರು ನೀರಾಚೆ ತಾವರೆ

ತಾವರೆ ಆಚೆ ತವರೂರು |

ತಾವರೆ ಆಚೆ ತವರೂರು ಹೋದರೆ

ತಿರುಗಿ ಬರುವುದಕ್ಕೆ ಮನಸ್ಸಿಲ್ಲ ||1||

 

ಕಣ್ಣಿಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ

ಹೆಣ್ಣು ಮಕ್ಕಳಿಗೆ ತವರಾಸೆ, |

ಹೆಣ್ಣು ಮಕ್ಕಳಿಗೆ ತವರಾಸೆ ತಾಯವ್ವ

ನಿನ್ನಾಸೆ ನಮಗೆ ಅನುಗಾಲ ||2||

 

ಯಾರಾದರೂ ಹೆತ್ತ ತಾಯಂತೆ ಆದಾರೆ

ಸಾವಿರ ಸೌದೆ ಒಲೆಯಲ್ಲಿ |

ಸಾವಿರ ಸೌದೆ ಒಲೆಯಲ್ಲಿ ಉರಿದಾರು

ದೀವಿಗೆಯಂತೆ ಬೆಳಕುಂಟೆ ||3||

 

ಒಬ್ಬರಿರುವ ಮನೆಗೆ ಹಬ್ಬದಿರು ಮಲ್ಲಿಗೆ

ಒಬ್ಬಳೇ ಕೂತು  ಮುಡಿಲಾರೆ |

ಒಬ್ಬಳೇ ಕೂತು  ಮುಡಿಲಾರೆ ಮಲ್ಲಿಗೆ

ಹಬ್ ಹೋಗು ನನ್ನ ತವರಿಗೆ ||4||

 

ತಾಯಿ ನನ ಹಡೆದವ್ವ ಜೀವೆಲ್ಲ ನನ್ನ ಮ್ಯಾಲ

ಕಡಿ ಹಾಕು ರಾಯ ಕುದುರೇಗೆ |

ಕಡಿ ಹಾಕು ರಾಯ ಕುದುರೇಗೆ ಸಂಗಾತ

ಆಳಾಕಳು ಅರಸ ಐನೋರು ||5||

...............................................................

 


No comments:

Post a Comment