ಹಾಡಲು ಕಲಿಯಿರಿ(CLICK HERE TO LEARN THIS SONG)
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೆ ಸಂತಸ ಇರಲು
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೇ ಗೆಳೆಯ
ಪ್ರೇಮದ ಜೋಡಿಗೆ ಆಗದು ಪ್ರಳಯ ||ಒಂದೇ||
ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟುಹಾಕೋ ಬೆಂಕಿಯೇ ತನ್ನ ತಾನೆ ಸುಟ್ಟರೆ
ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿಯಿಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ ||1||
ಮೂಡಣದಿ ಮೂಡಿದ ಸಿಂದೂರವೇ ಆಗಿ ಬಾ
ಜೀವಧಾರೆ ಆಗಿಬಾ ಪ್ರೇಮ ಪುಷ್ಪ ಸೇರುಬಾ
ಬಾನಗಲ ತುಂಬಿದ ಆಸೆಗಳ ತುಂಬು ಬಾ
ಸಿಂಗಾರವೇ ತೇಲಿ ಬಾ ಸಂತೋಷವ ನೀಡು ಬಾ
ಪ್ರೆಮದಾಸೆ ನನ್ನ ನಿನ್ನ ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ
ದೇವರ ಗುಡಿಗೂ ವಿಗ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರು ಗಿರಿಯ ನಾ ಹೊರುವೆ ನಿನ್ನಾಣೆ ||2||
………………………………………………………………………………….
No comments:
Post a Comment