Dec 20, 2024

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ SONG LYRICS IN KANNADA| ADILAKSHMI DEVIGE SONG LYRICS|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ

ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ

ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ llPll

 

ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ

ಭಾಗ್ಯದಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ

ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ

ಧನ ಧಾನ್ಯವ ಕೊಟ್ಟುs ಸಂತಾನ ಕರುಣಿಸಮ್ಮ ll1ll

 

ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ

ಕಮಲನಯನೆ ನಿಜ ಕಮಲವದನೆ ಕಮಲಾಕ್ಷ ವಲ್ಲಭೆ ಬಾರೆ

ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ

           ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ll2ll


....................................................................................

No comments:

Post a Comment