Jan 29, 2025

ಅಂದವಾದ ತೋಯ ಜಗ LYRICS | SONG ON LORD KRISHNA | ANDAVADA TOYAJAGA |KANNADA SAVIGANA|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂದವಾದ ತೋಯ ಜಗ ಚಂದವಾದ ಪಾದದಿಂದ

ಓಡಿ ಬಾರೋ ರಂಗ ಸಾಗಿ ಬಾರೋ ||

 

ಸುತ್ತಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ

ಸುತ್ತಿ ಸುತ್ತಿ ತಾಳಲಾರೆ ಓಡಿ ಬಾರೋ

ಕತ್ತಲಾಯಿತೆನ್ನ ಕಂದ ಸಾಗಿ ಬಾರೋ ||1||

 

ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ

ಹರಿ ಎಲ್ಲಿ ಎನ್ನುತಿವೆ ಓಡಿ ಬಾರೋ

ಕರೆದರೆ ಸುಮ್ಮನೆ ನೀನು ಸಾಗಿ ಬಾರೋ ||2||

 

ಕಂಡ ಕಂಡ ಜನರು ನಿನ್ನ ಪುಂಡನೆಂದು ಸಾರುತಿದೆ

ಪುಂಡನೇನೋ ನೀನು ಓಡಿ ಬಾರೋ

ಪ್ರಚಂಡ ಆನಂದ ವಿಠಲ ಸಾಗಿ ಬಾರೋ ||3||

.......................................................................... 


No comments:

Post a Comment