ಹಾಡಲು ಕಲಿಯಿರಿ(CLICK HERE TO LEARN THIS SONG)
ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ
ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ
||
ಸೂರ್ಯನಾಗಿ
ಮೇಲೆ ಚರಿಸಿ ಕತ್ತಲನ್ನು ಸರಿಸುವೆ
ಮೋಡವಾಗಿ
ನೀರು ಸುರಿಸಿ ಲೋಕಕನ್ನ ಉಣಿಸುವೆ |
ಪ್ರಾಣವಾಯುವಾಗಿ
ಸುಳಿದು ಕಾಣದಂತೆ ಕಾಯುವೆ
ತಂದೆ
ನಿನ್ನ ಕರುಣೆಯ ಹೇಗೆ ನಾನು ಮರೆಯುವೆ ||1||
ಹಸಿರಿನಲ್ಲೂ
ಹೂವಿನಲ್ಲೂ ನಿನ್ನ ಹೆಜ್ಜೆ ಗುರುತಿದೆ
ಕೋಟಿ
ಹಕ್ಕಿ ಕಂಠದಲ್ಲಿ ನಿನ್ನ ಸ್ತೋತ್ರ ಚಿಮ್ಮಿದೆ |
ಎಲೆ
ಎಲೆಯೂ ನಿನ್ನ ಚಿತ್ರ ಕಲೆಯ ಘನತೆ ಸಾರಿದೆ
ಎಲ್ಲೆಲ್ಲೂ
ನೀನೇ ದೇವ ನಿನ್ನದಲ್ಲದೇನಿದೆ ||2||
ಈ
ಲೋಕ ನೀನು ಇರುವ ಸುಂದರ ದೇವಾಲಯ
ಒಳಗೆ
ಕೂತು ಮಿಡುವೆಯಂತೆ ಇದರ ಎಲ್ಲ ನಾಡಿಯ |
ಇದರ
ಸೇವೆ ನಿನ್ನ ಸೇವೆ ಎಂಬ ಋಷಿ ವಾಣಿಯ
ನಂಬಿದೆವು
ಹರಸು ನಮ್ಮ ನಾವು ಕಲಿತ ಶಾಲೆಯ ||3||
No comments:
Post a Comment