Jan 8, 2025

ಲೋಕಮಾತೆ ವಿಮಲ ಚರಿತೆ | POPULAR SONG ON GODESS SARASWATHI LYRICS| LOKA MAATHE VIMALA CHARITHE

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ

ಪಾಕಶಾಸನಾದಿ ವಂದ್ಯೇಕಮಲ ಭವನ ಮಡದಿಯೇ||

 

ಕಮಲ ನೇತ್ರೆ ಇಂದು ವದನೆ ಕೋಮಲಾಂಗಿ ಸುಂದರಿ

ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ||1||

 

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ

ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||2||

 

ಶೃಂಗ ಗಿರಿಯ ಪುರನಿವಾಸಿ ಪಾಹಿ ಶಾರದಾಂಬೆಯೇ

ಸೆರಗನೊಡ್ಡಿ ಬೇಡಿಕೊಳ್ಳುವೆ ಪಾದ ಪದ್ಮಕೆರಗುವೆ ||3||

............................................................................................................................................

No comments:

Post a Comment