ಹಾಡಲು ಕಲಿಯಿರಿ(CLICK HERE TO LEARN THIS SONG)
ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ
ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ॥
ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ
ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ॥೧॥
ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ
ಸ್ವರ ಪಂಚಮದಂತೆ ಸ್ಠಿರವಿಲ್ಲ ಚಿಂತನೆಯು
ರಾಗಾಲಾಪದಂತೆ ದಿವ್ಯ ರೂಪವಿಲ್ಲ
ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ॥೨॥
..................................................................................
No comments:
Post a Comment