ಕೈ ಮೀರಿ ಹೋದ ಮಾತಿಗೆ ಹುಡುಕಾಡಬಾರದು |ಪ|
ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು |
ತನ್ನ ಪ್ರೀತಿಯಿಲ್ಲದ ಪತಿಯ ಕಂಡು ಹಿಗ್ಗಬಾರದು |
ಜಾರತ್ವ ಮಾಡೋ ಪತ್ನಿಯ ಕೂಡಿ ಅಳಬಾರದು |
ವೈರತ್ವ ಮಾಳ್ಪರ ಸೊಲ್ಲು ಕೇಳಬಾರದು |1|
ದುಷ್ಟೇ ಕರ್ಕಶಿ ಸ್ತ್ರೀಯ ಹೆಸರು ತೆಗೆಯಬಾರದು |
ಹತ್ತು ಮಂದಿಗೆ ಅಂಜದವನ ಸ್ನೇಹಿಸಬಾರದು
ಪಂಕ್ತಿಯಲಿ ಪರಪಂಕ್ತಿಯನು ಮಾಡಬಾರದು
ಮಂಕು ಜೀವನಾಗಿ ಮುಕ್ತಿ ಬೇಡಬಾರದು |2|
ಆಚಾರಹೀನನ ಮನೆಯೊಳು ಊಟ
ಮಾಡಬಾರದು |
ವಿಚಾರ ಇಲ್ಲದ ಸಭೆಯೊಳು ಕೂಡಬಾರದು |
ಪರಪುರುಷರಿದ್ದೆಡೆ ಒಬ್ಬಳಿರಬಾರದು
ಪುರಂದರ ವಿಠಲನ
ಧ್ಯಾನ ಮರೆಯಬಾರದು
No comments:
Post a Comment