ತೂಗಿರೆ ರಾಯರ ತೂಗಿರೆ ಗುರುಗಳ SONG LYRICS IN KANNADA | GURU RAGHAVENDRA SWAMY SONG LYRICS | KANNADA SAVIGANA LYRICS |

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ: ಜಗನ್ನಾಥ ದಾಸರು


ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ ||ಪ||

ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ ||ಅಪ||

ಕು೦ದಣ ಮಯವಾದ ಚಂದದ ತೊಟ್ಟಿಲೊಳ್
ಅಂದದಿ ಮಲಗ್ಯಾರೆ ತೂಗಿರೆ
ನಂದನ ಕಂದ ಮುಕುಂದ ಗೋವಿಂದನ
ಚಂದದಿ ಭಜಿಪರ ತೂಗಿರೆ

ಜೋ ಜೋ ಜೋ ಜೋ ||೧||

ಯೋಗ ನಿದ್ರೆಯನ್ನು ಬೇಗನೆ ಮಾಡುವ
ಯೋಗಿಶ ವಂದ್ಯರ ತೂಗಿರೆ
ಯೋಗಿಶಯನನ ಪಾದ ಯೋಗದಿ ಭಜಿಸುವ

ಭಾಗವತರನ್ನ ತೂಗಿರೆ

ಜೋ ಜೋ ಜೋ ಜೋ ||೨||

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ

ಜೋ ಜೋ ಜೋ ಜೋ ||೩ ||

ಭಜಕ ಜನರು ತಮ್ಮ ಭಜನೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಾಳ್ಪರ ತೂಗಿರೆ

ಜೋ ಜೋ ಜೋ ಜೋ ||೪||

…………………………………………………………………………………………………………


No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...