ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? 

ಸಡಗರದ ಮಾತುಗಳ ಬಿಂಕವೇಕೆ?

ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? 

ಸಂಪ್ರದಾಯದ ಮರುಳು ಲಜ್ಜೆಯೇಕೆ?

 

ನೇವುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ

 ಸವಿಗೊರಳಿನಿಂಚರವ ಕೆಡಿಸದಿರಲಿ
ಸಿಂಗರದ ಜವನಿಕೆಯು ದೊರೆ ನಿನ್ನ ಸಿರಿಮೆಯ

ಸೌಂದರ್ಯವನು ಮಬ್ಬುಗೊಳಿಸದಿರಲಿ ||1||

 

ನಗ್ನತೆಗೆ ನಾಚದೆಲೆ ಸಿರಿತಳಿರ ತೆಕ್ಕೆಯಿಂ 

ಮೂಡಿಸುಗ್ಗಿಯನೊಲಿವ ಹೂವಿನಂತೆ

ಸಿಂಗರದ ಹೊರೆಯುಳಿದು ಮಂತ್ರಗಳ ಮರೆಯುಳಿದು 

ಪ್ರೇಮದಾರತಿ ಹಿಡಿದು ತೇಲಿ ಬರುವೆ ||2||

 ---------------------------------------------------------------------------------

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...