Oct 27, 2019

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ | PREETHIYA KARE KELI WITH LYRICS




ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ

(ಭಾವಗೀತೆ)


ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ  
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ  ಹೊಳೆದಂತೆ ದೀಪ ಹಚ್ಚ||

ಕರಿ ಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಚ||1||

ಹಳೆಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ||2||

ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೊತೆ ಉಲಿ ಏಳಲಿ ದೀಪ ಹಚ್ಚ
ನನ್ನಂತರಂಗದಿ ನಂದದೆ ನಿಂದಿಪ
ನಂದಾದೀಪವಾಗಿರಲಿ ದೀಪ ಹಚ್ಚ||3||
-----------------------------------------------------------------------------

ಹಾಡಲು ಕಲಿಯಿರಿ(LEARN HOW TO SING THIS SONG)

Also See:

Oct 23, 2019

ಶಾಂತಿ ಮಂತ್ರಗಳು (ಅರ್ಥ ಸಹಿತ) |SHANTI MANTRAS WITH MEANING




ಶಾಂತಿ ಮಂತ್ರಗಳು

ಓಂ ಸಹನಾ ವವತು ಸಹ ನೌ ಭುನಕ್ತು

ಸಹ ವೀರ್ಯಂ ಕರವಾವಹೈ

ತೇಜಸ್ವಿ ನಾ ವಧೀತಮಸ್ತು ಮಾ ವಿಧ್ವಿಷಾವಹೈ

ಓಂ ಶಾಂತಿ: ಶಾಂತಿ: ಶಾಂತಿ: ||

(ದೇವರು ನಮ್ಮಿಬ್ಬರನ್ನೂ ಒಟ್ಟಿಗೆ ರಕ್ಷಿಸಲಿ, ನಮ್ಮಿಬ್ಬರನ್ನೂ ಒಟ್ಟಿಗೆ ಪೋಷಿಸಲಿ, ನಾವು ಹೆಚ್ಚಿನ ಶಕ್ತಿಯೊಂದಿಗೆ ಒಟ್ಟಾಗಿ ಕೆಲಸ ಮಾಡೋಣ,ನಮ್ಮ ಅಧ್ಯಯನವು ಹುರುಪಿನಿಂದ ಮತ್ತು ಪರಿಣಾಮಕಾರಿಯಾಗಿರಲಿ, ನಾವು ಪರಸ್ಪರ ವಿವಾದ ಮಾಡಬಾರದು ಅಥವಾ ನಾವು ಯಾವುದನ್ನೂ ದ್ವೇಷಿಸಬಾರದು. ನನ್ನಲ್ಲಿ ಶಾಂತಿ ಇರಲಿ, ನನ್ನ ಪರಿಸರದಲ್ಲಿ ಶಾಂತಿ ಇರಲಿ ನನ್ನ ಮೇಲೆ ಕಾರ್ಯನಿರ್ವಹಿಸುವ ಶಕ್ತಿಗಳಲ್ಲಿ ಶಾಂತಿ ಇರಲಿ)
---------------------------------------------------------------------------------------------------------------------

ಓಂ ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ

ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿ: ಶಾಂತಿ: ಶಾಂತಿ: ||

(ದೇವರು ನಮ್ಮನ್ನು ಅವಾಸ್ತವದಿಂದ ನೈಜತೆಗೆ ಕರೆದೊಯ್ಯಲಿ,ಕತ್ತಲೆಯಿಂದ ಬೆಳಕಿಗೆ ನಮ್ಮನ್ನು ಕರೆದೊಯ್ಯಲಿ,ನಮ್ಮನ್ನು ಸಾವಿನಿಂದ ಅಮರತ್ವದತ್ತ ಕೊಂಡೊಯ್ಯಲಿ, ಓಂ ಶಾಂತಿ, ಶಾಂತಿ, ಶಾಂತಿ)
 -------------------------------------------------------------------------------------------------------------------

ಓಂ ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್

ಓಂ ಶಾಂತಿ: ಶಾಂತಿ: ಶಾಂತಿ: ||

(ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಎಲ್ಲರೂ ಎಲ್ಲೆಡೆ ಶುಭವನ್ನು ನೋಡಲಿ
ಯಾರೂ ಎಂದಿಗೂ ದು:ಖವನ್ನುಅನುಭವಿಸದಿರಲಿ, ಓಂ ಶಾಂತಿ, ಶಾಂತಿ, ಶಾಂತಿ)

---------------------------------------------------------------------------------------------------------------------

ಹಾಡಲು ಕಲಿಯಿರಿ(LEARN HOW TO SING THIS SONG)

Also see:


Oct 19, 2019

NAVODAYADA KIRANA LEELE LYRICS :ನವೋದಯದ ಕಿರಣ ಲೀಲೆ(ನಿತ್ಯೋತ್ಸವ ಗೀತೆ)


ನವೋದಯದ ಕಿರಣ ಲೀಲೆ
(ನಿತ್ಯೋತ್ಸವ ಗೀತೆ)


ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ

 
ನವೋದಯದ ಕಿರಣ ಲೀಲೆ ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ  ಶುಭೋದಯವ ತೆರೆದಿದೆ||


ನದ ನದಿಗಳ ನೀರಿನಲ್ಲಿ ಗಿರಿ ವನಗಳ ಮುಡಿಗಳಲ್ಲಿ
ಶಿಲ್ಪ ಕಲಾ ಗಾನ ಕಾವ್ಯ ಗುಡಿ ಗೋಪುರ ಶಿಖರದಲ್ಲಿ
ಶುಭೋದಯವ ತೆರೆದಿದೆ  ಶುಭೋದಯವ ತೆರೆದಿದೆ||1||


ಮುಗ್ಧ ಜಾನಪದಗಳಲ್ಲಿ ದಗ್ಧ ನಗರ ಗೊಂದಲದಲಿ
ಯಂತ್ರ ತಂತ್ರದ ಅಟ್ಟಹಾಸ ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ  ಶುಭೋದಯವ ತೆರೆದಿದೆ||2||


ಹಳಬರಲ್ಲಿಹೊಸಬರಲ್ಲಿ ಹಿರಿಯರಲ್ಲಿ ಕಿರಿಯರಲ್ಲಿ
ನವ ಚೇತನದುತ್ಸಾಹದ ಚಿಲುಮೆ ಚಿಮ್ಮುವೆಡೆಗಳಲ್ಲಿ
ಶುಭೋದಯವ ತೆರೆದಿದೆ  ಶುಭೋದಯವ ತೆರೆದಿದೆ||3||
.........................................................................................................................

Oct 13, 2019

ಕುಹೂ ಕುಹೂ ಓ ಕೋಗಿಲೆಯೆ(ಭಾವಗೀತೆ) kuhu kuhu o kogileye kannada bhavageethe lyrics



ಕುಹೂ ಕುಹೂ ಕೋಗಿಲೆಯೆ

(ಭಾವಗೀತೆ)


ಕುಹೂ ಕುಹೂ ಕೋಗಿಲೆಯೇ
ನಾ ಹಾಡುವ ಹಾಡೊಂದ ಹಾಡುವೆಯ
ನಾ ಹಾಡುವ ಹಾಡೊಂದ ಹಾಡುವೆಯ
ನಾ ಹೇಳುವ ಮಾತೊಂದ ಕೇಳುವೆಯ||
 
ಚಿಗುರಿದ ಬನದಲಿ ನೀನಿರುವೆ
ನಿನ್ನಯ ಧ್ವನಿಯಲಿ ನಾನಿರುವೆ
ಹಾಡುತ ಕುಳಿತರೆ ಜಗವೆಲ್ಲ ನಾ
ನೋಡುತ ನಲಿಯುವೆ ದಿನವೆಲ್ಲ||1||
 
ಭಾರತ ದೇಶದ ಬಾನಿನಲಿ
ನಿನ್ನಯ ಧ್ವನಿಗಳ ಮಾರ್ಗದಲಿ
ಅಂಧಕಾರವಾ ತೊಲಗಿಸಲು ನೀ
ಅಮೃತ ವಾಣಿಯ ನುಡಿಸುವೆಯಾ||2||

...............................................................................................