Jul 27, 2020

ಸರಳ ಸುಭಾಷಿತಗಳು (ಅರ್ಥ ಸಹಿತ)– 2| SUBHASHITAS WITH KANNADA MEANING -2



ಸರಳ ಸುಭಾಷಿತಗಳು – 2


ಪಠತೋ ನಾಸ್ತಿ ಮೂರ್ಖತ್ವಮ್ ಜಪತೋ ನಾಸ್ತಿ ಪಾತಕಮ್
ಮೌನಿನ: ಕಲಹೋ ನಾಸ್ತಿ ಭಯಮ್ ಚಾಸ್ತಿ ಜಾಗ್ರತ: ||
(ಓದುವವನಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಸಮಯವರಿತು ಮಾತನಾಡುವವನಿಗೆ ಕಲಹವಿಲ್ಲ, ಜಾಗ್ರತನಾಗಿರುವವನಿಗೆ ಭಯವಿಲ್ಲ.)

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ, ಶಾಸ್ತ್ರಂ ತಸ್ಯ ಕರೋತಿ ಕಿಂ
ಲೋಚನಾಭ್ಯಾಮ್ ವಿಹೀನಸ್ಯ ದರ್ಪಣಮ್ ಕಿಂ ಕರಿಷ್ಯತಿ||
(ಯಾರಿಗೆ ಸ್ವಂತ ಬುದ್ಧಿಯಿರುವುದಿಲ್ಲವೊ, ಅವನಿಗೆ ಶಾಸ್ತ್ರದ ಉಪಯೋಗವೇನು? ಕಣ್ಣುಗಳೆ ಇಲ್ಲದವನಿಗೆ ಕನ್ನಡಿಯಿಂದ ಏನು ಪ್ರಯೋಜನ?)

ವಿದ್ವತ್ವಮ್ ಚ ನ್ರಪತ್ವಮ್ ಚ ನೈವ ತುಲ್ಯಮ್ ಕದಾಚನ
ಸ್ವದೇಶೇ ಪೂಜ್ಯತೇ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೆ
(ವಿದ್ಯೆ ಮತ್ತು ಅರಸೊತ್ತಿಗೆಗಳು ಒಂದಕ್ಕೊಂದು ಸರಿದೂಗಲಾರವು. ಅರಸನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ಇಲ್ಲವೇ ಮನ್ನಣೆ: ಆದರೆ ವಿದ್ಯಾವಂತರಿಗೆ ಎಲ್ಲೆಡೆ ಮರ್ಯಾದೆಯಿದೆ.)



Also see:





Jul 26, 2020

ಆವ ಕುಲವೋ ರಂಗ ಅರಿಯಲಾಗದು(AAVA KULAVO RANGA ARIYALAGADU LYRICS IN KANNADA



ಆವ ಕುಲವೋ ರಂಗ ಅರಿಯಲಾಗದು


ಆವ ಕುಲವೋ ರಂಗ ಅರಿಯಲಾಗದು,
ಆವ ಕುಲವೋ ರಂಗ ಅರಿಯಲಾಗದು
ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ
ದೇವ ಲೋಕದ ಪಾರಿಜಾತವ ಹೂವ ಸತಿಗೆ ತಂದನಂತೆ||

ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ
ಕೊಳಲನೂದಿ ಮೃಗ ಪಕ್ಷಿಗಳ ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗೀರೇಳುಲೋಕವ ಇರಿಸಿ ತಾಯಿಗೆ ತೋರ್ದನಂತೆ||1||

ಗೊಲ್ಲತಿಯರ ಮನೆಯ ಪೊಕ್ಕು ಕಳ್ಳತನವ ಮಾಡಿದನಂತೆ
ಗೊಲ್ಲರ ಪೂತನಿ ವಿಷವನುಂಡು ಮೆಲ್ಲನೆ ಧ್ರಡನ ಕೊಂದನಂತೆ
ಪಕ್ಷಿ ತನ್ನ ವಾಹನನಂತೆ ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದು ಮುಖದ ಚೆಲ್ವನಂತೆ||2||

ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ
ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ ಕಡಲ ತಡಿಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ||3||


ಹಾಡಲು ಕಲಿಯಿರಿ(LEARN HOW TO SING THIS SONG)

Also See:



Jul 15, 2020

ಬಂದನೋ ಬಂದನೋ ನಮ್ಮ ಗಣಪ ಬಂದನೋ (BANDANO BANDANO SONG LYRICS )


         

ಬಂದನೋ ಬಂದನೋ ನಮ್ಮ ಗಣಪ ಬಂದನೋ



ಬಂದನೋ ಬಂದನೋ ನಮ್ಮ ಗಣಪ ಬಂದನೋ
ಬಂದನೋ ಬಂದನೋ ನಮ್ಮ ಗಣಪ ಬಂದನೋ
ತಂದನೋ ತಂದನೋ ಹರುಷವನ್ನು ತಂದನೋ
ತಂದನೋ ತಂದನೋ ಹರುಷವನ್ನು ತಂದನೋ||

ವಿಘ್ನಗಳನು ನೀಗಿ ನಮಗೆ ನೀಡುತಾನೆ ಗಣಪನು
ವಿಘ್ನಗಳನು ನೀಗಿ ನಮಗೆ ನೀಡುತಾನೆ ಗಣಪನು
ಬುದ್ಧಿಯನ್ನು ಸಿದ್ಧಿಯನ್ನು ವಿದ್ಯೆಯನ್ನು ಗಣಪನು
ಬುದ್ಧಿಯನ್ನು ಸಿದ್ಧಿಯನ್ನು ವಿದ್ಯೆಯನ್ನು ಗಣಪನು||1||

ಗರಿಕೆ ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಗರಿಕೆ ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಅವನ ಮುಂದೆ ಇರಿಸಿ ನಾವು ಬೇಡುವೆವು ವರವನು
ಅವನ ಮುಂದೆ ಇರಿಸಿ ನಾವು ಬೇಡುವೆವು ವರವನು||2||


CLICK HERE FOR THE SONG

Jul 8, 2020

ಜಯ ಗಣೇಶ ಜಯ ಗಣೇಶ ಜಯ ಜಯ ಪ್ರಣಾಮ್(JAYA GANESHA JAYA GANESHA ) SONG LYRICS IN KANNADA


ಜಯ ಗಣೇಶ ಜಯ ಗಣೇಶ ಜಯ ಜಯ ಪ್ರಣಾಮ್



ಜಯ ಗಣೇಶ ಜಯ ಗಣೇಶ ಜಯ ಜಯ ಪ್ರಣಾಮ್
ಜಯ ಗಣೇಶ ಜಯ ಗಣೇಶ ಜಯ ಜಯ ಪ್ರಣಾಮ್|

ಜಯ ಜಯ ಜಯ ಶ್ರೀ ಗಣನಾಥ, ಜಯ ಜಯ ಮಂಗಳ ಶುಭ ದಾತ
ಜಯ ಜಯ ಜಯ ಶ್ರೀ ಗಣನಾಥ, ಜಯ ಜಯ ಮಂಗಳ ಶುಭ ದಾತ

ಏಕದಂತಗೇ ನಾಕು ಕೈಯವನಿಗೆ, ಬೇಕಾಗಿ ಮೂಷಿಕ ಏರಿದವನಿಗೆ
ಲೋಕವ ಸೃಷ್ಟಿಪ, ಸ್ಥಿತಿ ಲಯ ಗೈಯುವ
ಏಕಾತ್ಮ ಸತ್ಯರೂಪ ವಕ್ರತುಂಡ ದೇವನಿಗೆ |||| (ಜಯ ಜಯ )

ಚಂದ್ರನಿಗೆ ಶಾಪವ ಇತ್ತವನೆ,ಅರವಿಂದ ಸಂಭವ ಮುಖದವನೆ
ಇಂದೂ ವದನನೆ ಪರ್ವತಾತ್ಮಜನನೆ
ಚಂದದಿ ಆನಂದವೀಯುವ  ಗಣಪನಿಗೆ||||(ಜಯ ಜಯ )

ಇಷ್ಟ ಸಿದ್ಧಿಯ ಗೈವ ಹೇ ರಂಭಗೇ, ಮುಷ್ಟಿಯೊಳು ತುಂಡ  ಧರಿಸಿದಗೆ
ಸೃಷ್ಟಿಲಿ ಶೀಘ್ರದೀ ಸರ್ವ ಸಿದ್ಧಿಯನೀವ
ಶ್ರೀತ ಪುರಂದ ಸಿದ್ಧಿದಾತ ವಿಘ್ನೇಶಮೂರುತಿಗೆ||||(ಜಯ ಜಯ )

CLICK HERE FOR THE SONG



Jul 7, 2020

ಹೇಳುವುದಕಿವರಿಲ್ಲ,ಕೇಳುವುದಕಿವರಿಲ್ಲ(ಯೋಧರಿಗೆ ನಮನ) HELUVUDAKIVARILLA SONG LYRICS



  ಯೋಧರಿಗೆ ನಮನ


ಹೇಳುವುದಕಿವರಿಲ್ಲ,ಕೇಳುವುದಕಿವರಿಲ್ಲ
ಮಾಡಿ ಮಡಿಯುದಕಿವರು ಮಾಸದವರದು ಹೆಸರು
ನೂಕಿ ಮುನ್ನುಗ್ಗಿದರು ಲೋಕ ಬೆರಗಾಯ್ತು.....
ನೂಕಿ ಮುನ್ನುಗ್ಗಿದರು ಲೋಕ ಬೆರಗಾಯ್ತು... 



CLICK HERE FOR THE SONG

Also See:

Jul 5, 2020

ಮಳೆ ಬಂತು ಮಳೆ(ಶಿಶುಗೀತೆ) MALE BANTU MALE (KANNADA RHYMES) LYRICS




ಮಳೆ ಬಂತು ಮಳೆ
(ಶಿಶುಗೀತೆ)

ಮಳೆ ಬಂತು ಮಳೆ,
ಕೊಡೆ ಹಿಡಿದು ನಡೆ

ಕೊಚ್ಚೆಯಲ್ಲಿ ಜಾರಿ ಬಿದ್ದು
ಬಟ್ಟೆಯೆಲ್ಲ ಕೊಳೆ|

ಬಿಸಿಲು ಬಂತು ಬಿಸಿಲು,
ಕೋಟು ಟೋಪಿ ತೆಗೆ

ಬಾವಿಯಲ್ಲಿ ನೀರು ಸೇದಿ
ಸೋಪು ಹಾಕಿ ಒಗೆ||

………………………………………………………………………
CLICK HERE FOR THE SONG