ಹಾಡಲು ಕಲಿಯಿರಿ(CLICK HERE TO LEARN THIS SONG)
ತಾಯಿ
ಭಾರತಿಯ ಪಾದ ಪದ್ಮಗಳ ಪೂಜಿಸೋಣ
ಬನ್ನಿ
ಹಿಂದೂ
ಸಾಗರದ ಬಿಂದು ಬಿಂದುಗಳೇ ಒಂದುಗೂಡಿ ಬನ್ನಿ| ಒಂದುಗೂಡಿ ಬನ್ನಿ|
ಧ್ಯೇಯ ಭಾಸ್ಕರನ
ದಿವ್ಯ ಕಿರಣಗಳ ನವ್ಯ ರಮ್ಯ ಲಾಸ್ಯ
ತರುಣ
ರಂಗದೊಳು ಅರುಣ ಗೈಯುತಿಹ ನವೋದಯದ
ನಾಟ್ಯ
ಬಾಹು
ಬಾಹುಗಳ ಸ್ಪುರಣ ಗೊಳಿಸುತಲಿ ನಲಿಯುತೀಗ ಬನ್ನಿ| ನಲಿಯುತೀಗ ಬನ್ನಿ| ||1||
ಶಕ್ತಿಯಿಂದ
ಅಭಿವ್ಯಕ್ತಿಗೊಳಿಸಿರೈ ದೇಶ ಭಕ್ತಿಯನ್ನು
ತಪ್ತ
ಮನಗಳಲಿ ಸುಪ್ತವಾಗಿರುವ ಧ್ಯೇಯ ದೀಪ್ತಿಯನ್ನು
ತ್ಯಾಗ
ಸಾಹಸದ ಪುಷ್ಪ ಮಾಲೆಯನು ತಾಯ್ಗೆ ತೊಡಿಸ ಬನ್ನಿ| ತಾಯ್ಗೆ ತೊಡಿಸ ಬನ್ನಿ| ||2||
ಮಾತೃಭೂಮಿಯ
ವಿಛಿದ್ರ ಗೊಳಿಸುತಿರೆ ಕ್ಷುದ್ರ ಅರಿಯ ಸಂಚು
ಪ್ರಳಯ
ರುದ್ರ ನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು
ಶಸ್ತ್ರ
ಶಾಸ್ತ್ರಗಳ ಅಸ್ತ್ರ ಚಾಲನೆಗೆ ಸಿದ್ಧರಾಗಿ ಬನ್ನಿ| ಸಿದ್ಧರಾಗಿ ಬನ್ನಿ| ||3||
ಭರತ
ಭೂಮಿಯಲಿ ಭರದಿ ಭೋರಿಡಲಿ ದಿವ್ಯ
ಪಾಂಚಜನ್ಯ
ಯೋಗ
ಯಾಗಗಳ ತ್ಯಾಗ ಭೂಮಿಯಲಿ ಜನಿಸಿದವರೆ ಧನ್ಯ
ನಾಡ
ರಕ್ಷಣೆಗೆ ಬಾಳ ಕ್ಷಣ ಕ್ಷಣವ
ಮುಡಿಪು ನೀಡ ಬನ್ನಿ| ಮುಡಿಪು ನೀಡ
ಬನ್ನಿ| ||4||
.............................................................................................................................
Also See:
ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS IN KANNADA AND ENGLISH
No comments:
Post a Comment