ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
Oct 31, 2020
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು |UDAYAVAGALI NAMMA CHELUVA KANNADA NAADU LYRICS
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು||1||
ಜಕ್ಕಣನ ಶಿಲ್ಪಕಲೆ ಅಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜ ವೈ ವಿದ್ವತ್ತೆಗಳ ಕಾಡು||2||
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು||3||
Oct 27, 2020
ಬಾಲಬೋಧೆ(ಮಕ್ಕಳ ಬಾಯಿಪಾಠ): ದಿನಗಳು| KIDS BYHEART: NAME OF THE WEEKDAYS
ಬಾಲಬೋಧೆ(ಮಕ್ಕಳ ಬಾಯಿಪಾಠ) -1
ವಾರಕ್ಕೆ ಏಳು ದಿನಗಳು:
ಭಾನುವಾರ
ಸೋಮವಾರ
ಮಂಗಳವಾರ
ಬುಧವಾರ
ಗುರುವಾರ
ಶುಕ್ರವಾರ
ಶನಿವಾರ
................................................................
BHANUVAARA(SUNDAY)
SOMAVAARA(MONDAY)
MANGALAVAARA(TUESDAY)
BUDHAVAARA(WEDNESDAY)
GURUVAARA(THURSDAY)
SHUKRAVAARA(FRIDAY)
SHANIVAARA(SATURDAY)
...................................................................................
LEARN TO PRONOUNCE WEEK DAYS IN KANNADA
Oct 24, 2020
ಸರಳ ಸುಭಾಷಿತಗಳು(ಅರ್ಥ ಸಹಿತ) – 4| SUBHASHITAS WITH KANNADA MEANING -4
ಸರಳ ಸುಭಾಷಿತಗಳು – 4
ಫಲಾನ್ಯಪಿ ಪರಾರ್ಥಾಯ ವೃಕ್ಷಾ: ಸತ್ಪುರುಷಾಃ ಇವ||
ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ||
(ಸಿಂಹಕ್ಕೆ ಯಾರೂ ಸಂಸ್ಕಾರ ಮಾಡಿ ಪಟ್ಟ ಕಟ್ಟಲಿಲ್ಲ. ತನ್ನ ಪರಾಕ್ರಮದಿಂದ ಗೆದ್ದು ವನ ಪ್ರಪಂಚದಲ್ಲಿ ಅದು ಮೃಗ ಗಳಿಗೆ ಅಧಿಪತಿಯಾಗಿದೆ. ಸಿಂಹದ ಈ ಪರಾಕ್ರಮ ಗುಣದ ಮೂಲಕ ಕವಿಯು ಮಹಾಪುರುಷರ ಸತ್ವವನ್ನುಅರ್ಥಪೂರ್ಣವಾಗಿ ಬಣ್ಣಿಸುವನು. ಅವರು ಸ್ವಂತ ಬಲದಿಂದ ಮುಂದೆ ಬರುವರು. ಅವರಿಗೆ ಬೇರೆಯವರ ಮಧ್ಯಸ್ಥಿಕೆ ಬೇಡ)
ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್||
(ಮೊದಲ ಐದು ವರ್ಷಗಳು
ಮಕ್ಕಳನ್ನು ಲಾಲಿಸಬೇಕು. ಐದರಿಂದ ಹದಿನೈದು ವರ್ಷಗಳವರೆಗೆ ಅವರಿಗೆ ಶಿಸ್ತು ಬದ್ಧವಾಗಿರಲು ಕಲಿಸಬೇಕು.
ಹದಿನೈದು ವರ್ಷಗಳ ನಂತರ ಅವರೊಂದಿಗೆ ಸ್ನೇಹಿತರಂತೆ ಇರಬೇಕು)
……………………………………………………………………………………
ಹಾಡಲು ಕಲಿಯಿರಿ(LEARN HOW TO SING THIS SONG)
Also See:
ಹುಚ್ಚು ಕೋಡಿ ಮನಸು(ಸಾಹಿತ್ಯ) | HUCHU KODI MANSU SONG LYRICS IN KANNADA
ಹರಿವರಾಸನ೦ ವಿಶ್ವಮೋಹನ೦ ಸಾಹಿತ್ಯ(HARIVARASANAM VISHWA MOHANAM LYRICS: SONG ON LORD AYYAPPA
Oct 17, 2020
ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS
ತಾಯಿ ಶಾರದೆ ಲೋಕ ಪೂಜಿತೆ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ||
ಅಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು(2 ಸಲ)
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು||1||
ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ(2 ಸಲ)
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ||2||
ಒಳ್ಳೆ ಮಾತುಗಲಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ಆಸೆ ಪೂರೈಸು||3||
ಹಾಡಲು ಕಲಿಯಿರಿ(LEARN HOW TO SING THIS SONG)
Also See:
ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|