ಕಂಬದ ಮ್ಯಾಲಿನ ಗೊಂಬೆಯೇ
ಕಂಬದ
ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯ
ಮ್ಯಾಲಿನ ಚಿತ್ತಾರವೇ ಚಿತ್ತಗೊಟ್ಟಹೇಳೆ ಉತ್ತಾರವ |
ಒಬ್ಬಳೇ
ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
ಮಬ್ಬು ಹರಿಯುವದೇನ ಹಬ್ಬವಾಗುವುದೇನ||
ನೀರೊಲೆಯ
ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನು
ನಿತ್ಯವೇ|
ಒಳ್ಳೆ
ಘಮಗುಡುತಿಯಲ್ಲೆ ಸೀಗೆಯೆ
ನಿನ್ನ
ವಾಸನೀ ಹರಡಿರಲೀ ಹೀಗೆಯೇ|
ಒಬ್ಬಳೇ
ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
ಮಬ್ಬು ಹರಿಯುವದೇನ ಹಬ್ಬವಾಗುವುದೇನ||1||
ಒಪ್ಪಿಸುವೇ
ಹೂ - ಹಣ್ಣು ಭಗವಂತ
ನೆಪ್ಪೀಲೇ
ಹರಸು ನಗೀ ಇರಲಂತ|
ಕಪ್ಪುರವ
ಬೆಳಗುವೆ ದೇವನೇ
ತಪ್ಪದೇ
ಬರಲೆನ್ನ ಗುಣವಂತ|
ಒಬ್ಬಳೇ
ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು
ಮಬ್ಬು ಹರಿಯುವದೇನ ಹಬ್ಬವಾಗುವುದೇನ||2||
No comments:
Post a Comment