Jul 29, 2021

ಸರಳ ಸುಭಾಷಿತಗಳು(ಅರ್ಥ ಸಹಿತ)- 5| SUBHASHITA WITH MEANING - 5

 ಸರಳ ಸುಭಾಷಿತಗಳು(ಅರ್ಥ ಸಹಿತ)- 5| SUBHASHITA WITH MEANING - 5


 1. ರವಿ ಚಂದ್ರ ಘನಾ ವೃಕ್ಷಾ ನದೀ ಗಾವಶ್ಚ ಸಜ್ಜನಾ:

    ಏತೇ ಪರೋಪಕಾರಾಯ ಯುಗೇ ದೇವೇನ ನಿರ್ಮಿತಾ: ||

  ಅರ್ಥ: ಸೂರ್ಯ,ಚಂದ್ರ, ಮೋಡಗಳು, ನದಿ, ಗಿಡಗಳು,ಆಕಳು,ಸಜ್ಜನರು

ಇವರೆಲ್ಲ ಪರೋಪಕಾರಕ್ಕಾಗಿ ದೇವರಿಂದ ನಿರ್ಮಿಸಲ್ಪಟ್ಟಿರುವುದು.

 

 2. ಗುಣಾ: ಸರ್ವತ್ರ ಪೂಜ್ಯಂತೇ ಪಿತೃ ವಂಶೋ ನಿರರ್ಥಕ:

    ವಾಸುದೇವಂ ನಮಸ್ಯoತಿ ವಸುದೇವ೦ ಮಾನವಾ: ||

 ಅರ್ಥ: ಸದ್ಗುಣಿಗಳಿಗೆ ವಿಶೇಷ ಮನ್ನಣೆಯುಂಟು. ತಂದೆಯ ಹೆಗ್ಗಳಿಕೆಯನ್ನು ಹೇಳಿಕೊಳ್ಳುವುದು ವ್ಯರ್ಥ. ಜಗತ್ತಿನಲ್ಲಿ ಜನರು ವಾಸುದೇವನನ್ನು(ಕೃಷ್ಣ) ನಮಿಸುವರೇ ಹೊರತು, ಅವನ ತಂದೆಯಾದ ವಸುದೇವನನ್ನಲ್ಲ.

 

3. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್

ಕ್ಷಣ ತ್ಯಾಗೇ ಕುತೋ ವಿದ್ಯಾ  ಕಣ ತ್ಯಾಗೇ ಕುತೋ ಧನಂ||

  ಅರ್ಥ: ವಿದ್ಯೆ ಹಾಗೂ ಧನವನ್ನು ಸ್ವಲ್ಪ ಸ್ವಲ್ಪವಾಗಿ ಎಲ್ಲಾ ಕಡೆಯಿಂದಲೂ ಗಳಿಸುತ್ತ ಹೋಗಬೇಕು. (ಹಾಗೆಯೇ ತೆನೆ ತೆನೆ ಕೂಡಿದರೆ ರಾಶಿ). ಒಂದೊಂದು ಕ್ಷಣವನ್ನು ವ್ಯರ್ಥವಾಗಿ ಕಳೆದರೆ ವಿದ್ಯೆ ಪ್ರಾಪ್ತವಾಗುವುದಿಲ್ಲ. ಅದೇ ರೀತಿ ಚೂರು ಚೂರೆಂದು ವ್ಯರ್ಥ ಖರ್ಚು ಮಾಡುತ್ತಾ ಹೋದರೆ ಸಿರಿವಂತಿಕೆ ಹೇಗೆ ಬಂದೀತು?

.........................................................................................................................


Also see: 

No comments:

Post a Comment