ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು||
ಮರೆಮೋಸ ಕೊಂಕುಗಳನರಿಯಳಿವಳು
ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು
ಸಲಹಿಕೊಳಿರಿಮಗಳ ಓಪ್ಪಿಸುವೆವು||
ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ
ಎಂದೆದೂ ಅವಳ ನಡೆ
ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು
ನಿಮ್ಮ ಕುಲವನು ಬೆಳಸೆ ಬಂದಿರುವಳು||
ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ
ನಿಮ್ಮ ಸೊಸೆ
ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ
ನಿಮ್ಮ ಕುಲಶೀಲಗಳು ಪರಿಮಳಿಸಲಿ||
ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೇ ಈ ಇವರೆ ನಿನ್ನವರು
ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು
ಇವರ ದೇವರೆ ನಿನ್ನ ದೇವರುಗಳು||
ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು
ತಾಯಿರ
ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ
ತುಂಬಿದಾಯುಶ್ಯದಲಿ ಬಾಳಿ ಬದುಕು||
...........................................
No comments:
Post a Comment