ಓ ನನ್ನ ಚೇತನ, ಆಗು
ನೀ ಅನಿಕೇತನ
ಓ ನನ್ನ ಚೇತನ, ಆಗು
ನೀ ಅನಿಕೇತನ||
ರೂಪ
ರೂಪಗಳನು ದಾಟಿ ನಾಮಕೋಟಿಗಳನು ಮೀಟಿ
ಎದೆಯ
ಬಿರಿಯೆ ಭಾವದೀಟಿ||1||
ನೂರು ಮತದ ಹೊಟ್ಟ
ತೂರಿ ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ
ಏರಿ||2||
ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು
ಮುಟ್ಟದಿರು ಓ ಅನಂತವಾಗಿರು||3||
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು
ಬಾ||4||
..................................................................................................
ಹಾಡಲು ಕಲಿಯಿರಿ(CLICK HERE TO LEARN THIS SONG)
..................................................................................................................
O NANNA CHETANA , AAGU NEE ANIKETANA
ROOPA ROOPAGALANU DAATI NAAMA KOTIGALANU MEETI
EDEYA BIRIYE BHAAVA DEETI ||1||
NOORU MATADA HOTTA TOORI ELLA TATWADELLE MEERI
NIRDIGANTAVAAGI ERI||2||
ELLIYU NILLADIRU MANEYANENDU KATTADIRU
KONEYANENDU MUTTADIRU
O ANANTHA VAAGIRU||3||
ANANTHA THAAN ANANTHAVAAGI
AAGUTHIHANE NITHYA YOGI
ANANTHA NEE ANANTH VAAGU
AAGU AAGU AAGU BAA||4||
.......................................................................................................
Also See:
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ |NINNA PREMADA PARIYA NANARIYE SONG LYRICS IN KANNADA AND ENGLISH
ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS
No comments:
Post a Comment