ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು...
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು ...ನಿನ್ನೋಳಿದೆ ನನ್ನ ಮನಸ್ಸು||
ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ ...
ತೀರದಲಿ ಬಳುಕುವಲ್ಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ ...ನಿನ್ನೋಳಿದೆ ನನ್ನ ಮನಸ್ಸು||1||
ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ....
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ... ನಿನ್ನೋಳಿದೆ ನನ್ನ ಮನಸ್ಸು||2||
..............................................
ಹಾಡಲು ಕಲಿಯಿರಿ(CLICK HERE TO LEARN THIS SONG)
.........................................
NINNA PREMADA PARIYA NAANARIYE KANKAANGI
NINNOLIDE NANNA MANASU...
HUNNIMEYA RAATRIYALI UKKUVUDU KADALAAGI
NINNOLUME NANNA KANDU .. NINNOLIDE NANNA MANASU||
SAAGARANA HRADAYADALI RATNA PARVATA MAALE
MINCHINALI MEEVUDANTHE...
TEERADALI BALUKUVALE KANNA CHUMBISI MATHE
SAAGUVUDU KANASINATHE...NINNOLIDE NANNA MANASU||1||
ALE BANDU KAREYUVUDU NINNOLUME ARAMANEGE
VALAGADALA RATHNA PURIGE...
ALEYIDUVA MUTHINALE KAANUVUDU NINNOLUME
OLAGUDIYA MOORTHI MAHIME.. NINNOLIDE NANNA MANASU||2||
.....................................................
Also See:
ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA
No comments:
Post a Comment