Jan 17, 2022

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ(Hindustanavu Endu Mareyada ....Janmisali) Lyrics in Kannada And English

ಹಾಡಲು ಕಲಿಯಿರಿ(CLICK HERE TO LEARN THIS SONG) 


ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯಾ ಗುಡಿಯಲ್ಲಿ

ಧೇಶಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದಾ ಶಾಂತಿ ಮಂತ್ರದ
ಘೋಷವ ಎಲ್ಲೆಡೆ 
ಮೊಳಗಿಸಲಿ

ಸಕಲ ಧರ್ಮದ ಸತ್ವ ಸಮನ್ವಯ

ತತ್ವ ಜ್ಯೋತಿಯ ಬೆಳಗಿಸಲಿ||1||

ಕನ್ನಡ ತಾಯಿಯ ಕೋಮಲ ಹೃದಯದ
ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ
ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ
ಕಲ್ಲು ಕಲ್ಲಿನಲೂ ಕೆತ್ತಿಸಲಿ ||2||

......................................

Hindustanavu Endu Mareyada
Bharata Ratnavu Janmisali
Ee Kannada Maateya Madilalli
Ee Kannada Nudiya Gudiyalli||

Deshabhaktiya Bisi Bisi Nettaru
Dhamani Dhamaniyali Tumbirali
Vishwapremada Shanti Mantrada
Ghoshava Ellede Molagisali
Sakala Dharmada Satva Samanvaya
Tatva Jyotiya Belagisali||1||

Kannada Taayiya Komala Hradayada
Bhavya Shasana Bareyisali
Kannada Naadina Ede Edeyallu
Kannada Vaaniya Stapisali
Ee Mannina Punyada Divya Charitreya
Kallu Kallinalu Kettisali||2||

............................................

Also See:

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA ,NAGENDRA HARAYA SONG LYRICS IN KANNADA

PATRIOTIC SONGS(ದೇಶಭಕ್ತಿಗೀತೆಗಳು) ; KANNADA FILM SONGS(ಕನ್ನಡ ಚಿತ್ರಗೀತೆಗಳು)

No comments:

Post a Comment