ಹಾಡಲು ಕಲಿಯಿರಿ(CLICK HERE TO LEARN THIS SONG)
ಉಜ್ವಲ
ಇತಿಹಾಸ ಎಮ್ಮದು ಭಾರತ ನಾಡಿನ ಸ್ಪೂರ್ತಿಯದು
ಉಜ್ವಲ
ಇತಿಹಾಸ ಎಮ್ಮದು ಭಾರತ ನಾಡಿನ ಸ್ಪೂರ್ತಿಯದು
ಪವಿತ್ರ
ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನು
ಪವಿತ್ರ
ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನು
ಗುರು
ಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ
ಗುರು
ಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ
ಧೈರ್ಯದಿ
ಗೋಡೆಯ ಮಧ್ಯದಲಿ||1||
ನಾಡಿನ
ಗೌರವ ರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ನಾಡಿನ
ಗೌರವ ರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ರಜಪೂತರ
ನಿಜ ತೇಜವ ತೋರುತ ದೇಶದೊಳಲೆದನು
ಕಂಗೆಟ್ಟು
ರಜಪೂತರ
ನಿಜ ತೇಜವ ತೋರುತ ದೇಶದೊಳಲೆದನು
ಕಂಗೆಟ್ಟು
ಮಾಡಿದ
ಜನತೆಯ ಒಗ್ಗಟ್ಟು||2||
ವೀರ
ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಘಲರ ಕಿರುಕುಳವ
ವೀರ
ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಘಲರ ಕಿರುಕುಳವ
ವೀರ
ಶಿರೋಮಣಿ ಝಾನ್ಸಿ ರಾಣಿಯು ನಿಂತಳು ಬ್ರಿಟಿಷರ ಎದುರಾಗಿ
ಮಾತೆಯ ಮುಕ್ತಿಯ
ಕರೆಗಾಗಿ||3||
ರಕ್ತದಿ
ಬರೆದಿಹ ವೀರ ಚರಿತ್ರೆಯ ಪಠಿಸುವ
ಪ್ರತಿದಿನ ಹೆಮ್ಮೆಯಲಿ
ರಕ್ತದಿ
ಬರೆದಿಹ ವೀರ ಚರಿತ್ರೆಯ ಪಠಿಸುವ
ಪ್ರತಿದಿನ ಹೆಮ್ಮೆಯಲಿ
ಸಾಹಸ
ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ
ಪಥದಲ್ಲಿ
ಸಾಹಸ
ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ
ಪಥದಲ್ಲಿ
ನಮಿಸುವ
ಅವರನು ಮನದಲ್ಲಿ||4||
...........................................................................................................
Also See:
PATRIOTIC SONGS(ದೇಶಭಕ್ತಿಗೀತೆಗಳು)
ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA
No comments:
Post a Comment