1. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ||
(ರಾಮ, ರಾಮಭದ್ರ, ರಾಮಚಂದ್ರ, ಬ್ರಹ್ಮ ಸ್ವರೂಪಿ, ರಘುನಾಥ ಹೀಗೆ ಬೇರೆ ಬೇರೆ ಹೆಸರುಗಳ, ಸೀತಾಪತಿಯಾದ ಶ್ರೀ ರಾಮನಿಗೆ ನಮಸ್ಕರಿಸುತ್ತೆನೆ.)
2. ಶ್ರೀರಾಮ ರಾಮ ರಾಮೇತಿ ರಮೇ ರಾಮೆ ಮನೋರಮೆ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೆ||
(ವಿಷ್ಣು ಸಹಸ್ರನಾಮ ಶ್ಲೋಕದಲ್ಲಿ ಭಗವಾನ್ ಈಶ್ವರನೇ ಹೇಳುತ್ತಾನೆ:
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ||
(ಸಂಕಟಗಳನ್ನು ಹೋಗಲಾಡಿಸುವವನು, ಸಕಲ ಸಮೃದ್ಧಿಯನ್ನು ಕೊಡುವವನು, ಲೋಕದ ಆನಂದದಾಯಕ ವ್ಯಕ್ತಿತ್ವವುಳ್ಳ ಶ್ರೀ ರಾಮನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ)
4.ಶ್ರೀ ರಾಘವಂ ದಶರಥಾತ್ಮಜಮಪ್ರಮೇಯಮ್
ಸೀತಾಪತಿಂ ರಘುಕುಲಾನ್ವಯ ರತ್ನ ದೀಪಂ
ಆಜಾನುಬಾಹು೦ ಅರವಿಂದ ದಳಾಯತಾಕ್ಷo
ರಾಮಂ ನಿಶಾಚರ ವಿನಾಶಕಮ್ ನಮಾಮಿ||
(ರಘು ವಂಶ
ದ ರಾಘವನನ್ನು, ದಶರಥ ಪುತ್ರ, ಅಪ್ರಮೇಯ, ಸೀತಾಪತಿ, ರಘು ಕುಲ ದೀಪಕ, ಆಜಾನುಬಾಹು,
ಕಮಲದ
ಎಸಳಿನಂತೆ ಕಣ್ಣುಗಳುಳ್ಳ, ನಿಶಾಚರಗಳನ್ನು(ರಾಕ್ಷಸರನ್ನು) ನಾಶ ಮಾಡುವ ಸಾಮರ್ಥ್ಯವಿರುವ ಶ್ರೀ ರಾಮನಿಗೆ
ನಮಿಸುತ್ತೇನೆ.)
5. ವೈದೇಹಿ ಸಹಿತಮ್ ಸುರದ್ರುಮತಲೆ ಹೈಮೆ ಮಹಾ ಮಂಡಪೆ
ಮಧ್ಯೇ ಪುಷ್ಪಕ ಮಾಸನೆ ಮಣಿಮಯೇ ವೀರಾಸನೇ ಸುಸ್ಥಿತಮ್
ಅಗ್ರೇ ವಾಚಯತಿ ಪ್ರಭಂಜನ ಸುತೇ ತತ್ವಮ್ ಮುನಿಭ್ಯಪರಮ್
ವ್ಯಾಖ್ಯಾ0 ತಮ್ ಭರತಾದಿಭಿ: ಪರಿವೃತಮ್ ರಾಮಂ ಭಜೆ ಶ್ಯಾಮಲಂ||
(ವೈದೇಹಿ ಸಹಿತನಾಗಿ, ಕಲ್ಪಕವೃಕ್ಷದ(ದೇವದಾರು ಮರ) ಕೆಳಗೆ, ಸುವರ್ಣ ಖಚಿತವಾದ ಸಭಾಂಗಣದ ಮಧ್ಯಭಾಗದಲ್ಲಿ ಪುಷ್ಪ ಹಾಗೂ ಮಣಿ ರತ್ನ ಖಚಿತವಾದ ಸಿಂಹಾಸನದಲ್ಲಿ ವಿರಾಜಮಾನವಾಗಿರುವ, ಮುಂಭಾಗದಲ್ಲಿ ಪ್ರಭಂಜನ(ವಾಯು) ಸುತನಾದ ಹನುಮಂತ, ಮುನಿಗಳು ಅತ್ಯುನ್ನತ ತತ್ವದ ವ್ಯಾಖ್ಯಾನವನ್ನು ವಾಚಿಸಲ್ಪಡುತ್ತಿರುವ, ಭರತಾದಿಗಳಿಂದ ಸುತ್ತುವರಿಯಲ್ಪಟ್ಟ, ಶ್ಯಾಮಲ ವರ್ಣದ ಶ್ರೀ ರಾಮನನ್ನು ಪೂಜಿಸುತ್ತೇನೆ).
6.ಲೋಕಾಭಿರಾಮಂ ರಣರಂಗಧೀರಂ
ರಾಜೀವ ನೇತ್ರಂ ರಘುವಂಶನಾಥ೦।
ಕಾರುಣ್ಯರೂಪಂ ಕರುಣಾಕರಂ ತಂ
ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ
||
ಜನರಿಗೆ ಆನಂದವನ್ನು ಉಂಟು ಮಾಡುವ ,ಯುದ್ಧಭೂಮಿಯಲ್ಲಿ ಶೂರನಾದ,ಕಮಲದಂತಹ ಕಣ್ಣುಗಳನ್ನು
ಹೊಂದಿರುವ, ರಘುಕುಲ ಶ್ರೇಷ್ಠನಾದ,ದಯಾ ಸ್ವರೂಪಿಯಾದ, ಕೃಪಾಳುವಾಗಿರುವ,
ಶರಣಾರ್ಥಿಗಳನ್ನು ರಕ್ಷಿಸುವ ಶ್ರೀರಾಮ ಚಂದ್ರ ನನ್ನು ಆಶ್ರಯಿಸುತ್ತೇನೆ.
............................................................................................................................
Also See:
ಸುಭಾಷಿತ: ಯತ್ರ ನಾರ್ಯಸ್ತು ಪೂಜ್ಯಂತೆ (ಅರ್ಥ ಸಹಿತ) |YATRA NAARYASTU POOJYANTE WITH MEANING
ರಾಮ ರಾಮ ರಾಮ್ ರಾಮ್ ರಾಮ್(RAMA RAMA RAM RAM RAM LYRICS IN KANNADA)
No comments:
Post a Comment