ಹಾಡಲು ಕಲಿಯಿರಿ(CLICK HERE TO LEARN THIS SONG)
ಕನಕನ
ಕಂಡ ಕಂಗಳಲೆನ್ನ ಕಾಣಬಾರದೇನು ಸ್ವಾಮಿ ಕಾಣಬಾರದೇನು
ಕರುಣಾಪೂರಿತ
ನೋಟದೊಳೆನ್ನ ನೋಡಬಾರದೇನು ಸ್ವಾಮಿ ನೋಡಬಾರದೇನು||
ಕೊಳನೂದಿದ
ತುಟಿಯಲಿ ಕಿರುನಗೆ ತೇಲಬಾರದೇನೋ ಕೃಷ್ಣ ತೇಲಬಾರದೇನೋ
ಅರಳುವ
ಕಮಲವ ಹೋಲುವ ನಗೆಯ ತೋರಬಾರದೇನು ಕೃಷ್ಣ
ತೋರಬಾರದೇನು||1||
ಗಿರಿಯನು
ಎತ್ತಿದ ಕರದಲಿ ನೀನು ನನ್ನ ಹರಸಬಾರದೇ
ತಂದೆ ನನ್ನ ಹರಸಬಾರದೇ
ಅಭಯ
ಹಸ್ತವ ತೋರಿಸಿ
ಇಂದು ಭಯವಾ ಕಳೆಯಬಾರದೇ ಸ್ವಾಮಿ
ಭಯವ ಕಳೆಯಬಾರದೇ||2||
ಹಾವನು
ತುಳಿದ ಪಾದಗಳನ್ನು ಶಿರದಲಿ ಇರಿಸಬಾರದೆ ನನ್ನ ಶಿರದಲಿ ಇರಿಸಬಾರದೇ
ನಿನ್ನ
ಪಾದಗಳ ಹೊತ್ತು ತಲೆಯಲಿ ಧನ್ಯನಾಗಬಾರದೇ ಕೃಷ್ಣ ಧನ್ಯನಾಗಬಾರದೇ||3||
Also See:
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|
No comments:
Post a Comment