ಹಾಡಲು ಕಲಿಯಿರಿ(CLICK HERE TO LEARN THIS SONG)
ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ ||
ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ ||
ಸುಪ್ತದೈವರೇ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ ||
ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ || 1||
ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ ||
ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು
||2||
..........................................................................
No comments:
Post a Comment