Jan 30, 2023

ಸುಭಾಷಿತಗಳ ಮಹತ್ವ - SHLOKAS ON IMPORTANCE OF SUBHASHITAS WITH MEANING IN KANNADA |

 

CLICK HERE TO LEARN TO CHANT THESE SHLOKAS

पृथिव्यां त्रीणि रत्नानि जलमन्नं सुभाषितम्।

मूढै: पाषाणखन्डेषु रत्न संज्ञा विधीयते॥

 

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ

ಮೂಢೈ: ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೆ||

 

ಈ ಪ್ರಪಂಚದಲ್ಲಿ ಇರುವ ನಿಜವಾದ ರತ್ನ ಗಳೆಂದರೆ ಜಲ ಅನ್ನ ಹಾಗೂ ಸುಭಾಷಿತಗಳು .ಆದರೆ ಮೂರ್ಖರು ಬಂಡೆಯ ಕಲ್ಲುಗಳ ಚೂರುಗಳನ್ನು ಎಂದು ರತ್ನವೆಂದು ಭ್ರಮಿಸುತ್ತಾರೆ.

 ........................................................................................................................

 

द्राक्षा म्लानमुखी जाता शर्करा चाष्मतां गता |

सुभाषित रसस्याग्रे सुधा भीता दिवं गता ||

 

ದ್ರಾಕ್ಷಾ ಮ್ಲಾನಮುಖೀ ಜಾತಾ ,ಶರ್ಕರಾ ಚಾಷ್ಮತಾ೦ ಗತಾ।

ಸುಭಾಷಿತ ರಸಸ್ಯಾಗ್ರೇ, ಸುಧಾ ಭೀತಾ ದಿವ೦ ಗತಾ॥

 

ಸುಭಾಷಿತದ ರಸವನ್ನು ಕಂಡು ದ್ರಾಕ್ಷಿಹಣ್ಣಿನ ಮುಖ ಬಾಡಿಹೋಯಿತು ,ಸಕ್ಕರೆ(ಶರ್ಕರಾ) ಕಲ್ಲಿನಂತೆ ಗಟ್ಟಿಯಾಯಿತು ಹಾಗೂ ಅಮೃತವೂ(ಸುಧಾ) ಭಯಗೊಂಡು  ಸ್ವರ್ಗಕ್ಕೆ(ದಿವ೦) ಹೋಯಿತು.

 .....................................................................................................

नायं प्रयाति विकृतिं विरसो ​: स्यात्

क्षीयते बहु जनैर्नितरां निपीत:|

जाड्यं निहन्ति रुचिमेति करोति तृप्तिम्

नूनं सुभाषितरसॊन्यरसातिशायी ||

 

ನಾಯ೦ ಪ್ರಯಾತಿ ವಿಕೃತಿ೦ ವಿರಸೋ : ಸ್ಯಾತ್

ಕ್ಷೀಯತೇ ಬಹು ಜನೈರ್ನಿತರಾ೦ ನಿಪೀತ:

ಜಾಡ್ಯ೦ ನಿಹಂತಿ ರುಚಿಮೇತಿ ಕರೋತಿ ತೃಪ್ತಿ೦

ನೂನ೦ ಸುಭಾಷಿತರಸೋನ್ಯರಸಾತಿಶಾಯೀ॥

 

ಸುಭಾಷಿತವೆನ್ನುವ ರಸವು ಇತರ ರಸಗಳ೦ತೆ ಕೆಟ್ಟು ಹೋಗುವುದಿಲ್ಲ ,ಸತ್ವವನ್ನು ಕಳೆದುಕೊಳ್ಳುವುದಿಲ್ಲ  ಹಾಗೂ ಬೇಸರವನ್ನು ಮೂಡಿಸುವುದಿಲ್ಲ. ಎಷ್ಟೇ ಜನರು  ಹೆಚ್ಚು ಹೆಚ್ಚು ಸೇವಿಸಿದಾಗಲೂ ಕ್ಷಯಿಸುವುದಿಲ್ಲ. ಇದು ಆಲಸ್ಯವನ್ನು ಹೋಗಲಾಡಿಸುತ್ತದೆ,ರುಚಿಕರವಷ್ಟೇ ಅಲ್ಲದೇ, ತೃಪ್ತಿಯನ್ನೂ ಕೊಡುತ್ತದೆ. ಸುಭಾಷಿತವೆನ್ನುವ ರಸವು ಎಲ್ಲಾ ರಸಗಳನ್ನೂ ಮೀರಿಸುತ್ತದೆ.

 ..........................................................................................................

संसार विषवृक्षस्य द्वे फले अमृतॊपमे |

सुभाषित रस्सास्वादः संगति: सुजनै: सह ||

 

ಸಂಸಾರ ವಿಷ ವೃಕ್ಷಸ್ಯ ದ್ವೇ ಫಲೇ ಅಮೃತೋಪಮೇ।

ಸುಭಾಷಿತ ರಸಾಸ್ವಾದ: ಸಂಗತಿ: ಸುಜನೈ: ಸಹ॥

 

ಸಂಸಾರವೆನ್ನುವ ವಿಶ್ವ ವೃಕ್ಷದಲ್ಲಿ ಅಮೃತಕ್ಕೆ ಸಮಾನವಾದ ಎರಡು ಹಣ್ಣುಗಳಿವೆ ಅವುಗಳೆಂದರೆ ಸುಭಾಷಿತಗಳ ರಸವನ್ನು ಆಸ್ವಾದಿಸುವುದು ಹಾಗೂ ಸಜ್ಜನರ ಸಹವಾಸ.

.............................................................................................................................

No comments:

Post a Comment