ತುಂಗೆಯ ಅಲೆಯಲಿ
ತೇಲಿದೆ ಶಾರದೆ ವೀಣಾ ಗಾನ
ಸಂಪಿಗೆ ಮರದಲಿ
ಕೋಗಿಲೆಯು (೨ ಸಲ)
ಹಾಡಿದೆ ಶಾರದೆ ಗಾನಾ
( ೨ ಸಲ) ॥
ಮುಂಜಾನೆಯಲಿ
ಬಾನಾಡಿಗಳು ಗೂಡು ಬಿಡುವಾಗ (೨ ಸಲ)
ಬನದೊಳಗಿರುವ ಬಗೆ ಬಗೆ
ಹೂಗಳು ಪರಿಮಳ ಚೆಲ್ಲುತ್ತಿರುವಾಗ
ಕಾನನದಾ ದುಂಬಿಗಳೂ
ಝೇಂಕರಿಸುವಾಗ
ಮನದಲಿ ಧ್ಯಾನಿಸಿದೆ
ಶಾರದೆ ನಾಮಾ ॥೧॥
ಜ್ಞಾನ ವಿಕಾಸಕೆ
ಶಾರದೆ ಗಾನ
ಸಪ್ತ ಸ್ವರಗಳ ನಾದ
ಹೊಮ್ಮಲು
ತ್ರಿಗುಣಾತೀತ
ತ್ರಿವಿಕ್ರಮನಾಗಲುಶಾರದೆ ಗಾನ
ಭವಸಾಗರನ ನೆಮ್ಮದಿಗೆ
ಶಾರದೆ ಗಾನ॥೨॥
No comments:
Post a Comment