ರಚನೆ: ಪ್ರಸನ್ನ
ವೇಂಕಟದಾಸರು
ಜಯ ಜಯ ಮೃತ್ಯುಂಜಯ
ಮಹದೇವ
ಕಾಯೋ ಕರುಣದಿ
ಮಹಾನುಭಾವ॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಫಾಲ ನಯನ ಕಪಾಲೀ ಶೂಲಿ
ಮಲ್ಲಿಕಾಜಯ ಮಹಾಲಯ
ಮೌಲಿ।
ಫುಲ್ಲನಾಭನ ಬಲ್ಲಿದ
ಭಕುತಗೆ
ಒಲ್ಲೆನದೇ ಒಲಿವ ಅತಿ
ಸುಲಭಾ॥೧॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಮದನ ಮರ್ದನ
ಪಂಚಾಕ್ಷರಿ ಕೈಲಾಸ
ಸದನ ಸದಾಶಿವ ಸಾಂಬ
ರಮಣ ।
ದುರ್ದಶಾದಕ ಮರ್ದಕ
ಶಿವ ಶಿವ
ಸ್ವರ್ದುಣಿ ಸಹಿತ
ಕಪರ್ದಿತ ಪೂರ್ಣ ॥೨॥
ಜಯ ಜಯ ಜಯ ಜಯ ಶಿವ
ಶಿವ ಶಿವ ಶಿವ
ಹರ ಹರ ಹರ ಹರ ಶಿವ
ಶಿವ ಶಿವ ಶಿವ
ಓಂಕಾರ ಭುಜಗಾಲಂಕಾರ
ಗೌರೀ ವರ
ಶಂಕರ ಸಕಲ ಸಂಕಟ ಹರ
ಹರ ಹರ
ಕಿಂಕರ ಮನೋಹರ
ವಾಂಛಿತಾನ್ವರ
ಸಂಕರುಷಣ
ಪ್ರಸನ್ವೆಂಕಟ ಪ್ರೀಯ॥೩॥
No comments:
Post a Comment