ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ SONG LYRICS | IDU BHAGYA IDU BHAGYA SONG LYRICS | PURANDARA DASA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ

 ಪದುಮನಾಭನ ಪಾದ ಭಜನೆ ಸುಖವಯ್ಯಾ ॥ಪ॥

 ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ

 ಬಿಲ್ಲಾಗಿ ಇರಬೇಕು ಬಲ್ಲವರೊಳಗೆ॥

ಮೆಲ್ಲನೇ ಮಾಧವನ ಮನವ ಮೆಚ್ಚಿಸಬೇಕು

 ಬೆಲ್ಲವಾಗಿರಬೇಕು ಬಂಧು ಜನರೊಳಗೆ॥

 

 ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲುಬೇಕು

 ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ॥

 ಮಧ್ವ ಮತ ಅಬ್ಧಿಯಲಿ ಮೀನಾಗಿರಲುಬೇಕು

 ಶುದ್ಧನಾಗಿರಬೇಕು ಕರಣತ್ರಯಗಳಲೀ॥

 

ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು

 ನಿಶಿಹಗಲು ಶ್ರೀಹರಿಯ ನೆನೆಯಬೇಕು॥

 ವಸುಧೀಶ ಪುರಂದರ ವಿಠಲ ರಾಯನ

 ಹಸನಾದ ದಾಸರನು ಸೇವಿಸಲುಬೇಕು॥

---------------------------------------------------------------------------------------------

No comments:

Post a Comment

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ SONG LYRICS | IDU BHAGYA IDU BHAGYA SONG LYRICS | PURANDARA DASA

  ಹಾಡಲು ಕಲಿಯಿರಿ(CLICK HERE TO LEARN THIS SONG) ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ   ಪದುಮನಾಭನ ಪಾದ ಭಜನೆ ಸುಖವಯ್ಯಾ ॥ ಪ ॥   ಕಲ್ಲ...