ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ ||
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
ವೇದವನೋದಿದ ಬ್ರಹ್ಮನ ಶಿರಹೋಯ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ ||
NAADAPRIYA SHIVANEMBARU
NAADAPRIYA SHIVANALLA|
VEDAPRIYA SHIVANEMBARU
VEDAPRIYA SHIVANALLA
NAADAVA MAADIDA RAAVAnANGE AREYAAYUSHAVAAYITHU
VEDAVANODIDA BRAHMANA SHIRA HOYITHU
NAADAPRIYANU ALLA
VEDAPRIYANU ALLA
BHAKTHAPRIYA NAMMA KOODALASANGAMA DEVA||
........................................................................................................
No comments:
Post a Comment