ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||ಪ||
ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ||
ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || 1||
ಮೊಸರ ಮಾರಲು ಪೋದರೆ, ನಿನ್ನಯ ಕಂದ ಪೆಸರೇನೆಂದೆಲೆ ಕೇಳಿದ
ಹಸನಾದ ಹೆರಳ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ
ಕೃಷ್ಣ ||2||
ಪೋಗಿರೆ ರಂಗಯ್ಯನ, ಮೇಲೆ ನೀವು , ದೂರೇನು ಕೊಂಡು ಬಂದಿರೆ
ಸೃಷ್ಟೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ || 3||
No comments:
Post a Comment