ಹಾಡಲು ಕಲಿಯಿರಿ(CLICK HERE TO LEARN THIS SONG)
ವಿಘ್ನೇಶ್ವರ ನಿನಗೆ
ಪ್ರಥಮ ಪ್ರಣಾಮ
ಸ್ಮರಿಸುವೆ ನಿನ್ನಯ
ದಿವ್ಯ ನಾಮ ॥
ವಿಘ್ನ ವಿನಾಶಕ
ಬುದ್ಧಿಪ್ರದಾಯಕ
ವಿದ್ಯೆಯ ನೀಡೋ ಶ್ರೀ
ವರದಾಯಕ
ಚರಣ ಕಮಲ ನಿನ್ನ
ಪೂಜಿಪೆ ಅನುದಿನ
ಪಾವನಗೊಳಿಸೋ ಈ
ಶಾಂತಿಧಾಮ ॥1||
ಗಂಗಾಧರ ಸುತ ಚಂದ್ರ
ಸುಧಾಕರ
ಮಂಗಳಗೊಳಿಸೋ ಶ್ರೀ
ಶುಭಕಾರಕ ।
ಭವಸಾಗರವನು ದಾಟಲು
ಅನುದಿನ
ಸಾಧನವೇ ತವ ತಾರಕನಾಮ
॥2||
No comments:
Post a Comment