ಯಾ ದೇವಿ ಸರ್ವ ಭೂತೇಷು - LYRICS IN KANNADA | YA DEVI SARVA BHOOTESHU | DEVI STOTRA

 ಹಾಡಲು ಕಲಿಯಿರಿ(CLICK HERE TO LEARN THIS SONG)

 

ಯಾ ದೇವಿ ಸರ್ವ ಭೂತೇಷು ವಿಷ್ಣು ಮಾಯೇತಿ ಶಬ್ದಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||1 ||

ಯಾ ದೇವಿ ಸರ್ವ ಭೂತೇಷು
ಚೇತನೇತ್ಯಭಿಧೀಯತೇ
ನಮಸ್ತಸ್ಯೈ ನಮಸ್ತಸ್ಯೈ  ನಮಸ್ತಸ್ಯೈ ನಮೋ ನಮಃ ||2||

ಯಾ ದೇವಿ ಸರ್ವ ಭೂತೇಷು
ಬುದ್ದಿ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ  ನಮಸ್ತಸ್ಯೈ ನಮೋ ನಮಃ ||3||

ಯಾ ದೇವಿ ಸರ್ವ ಭೂತೇಷು
ನಿದ್ರಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||4||

ಯಾ ದೇವಿ ಸರ್ವ ಭೂತೇಷು
ಕ್ಷುಧಾ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||5||

ಯಾ ದೇವಿ ಸರ್ವ ಭೂತೇಷು
ಛಾಯಾ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||6||

ಯಾ ದೇವಿ ಸರ್ವ ಭೂತೇಷು
ಶಕ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||7||

ಯಾ ದೇವಿ ಸರ್ವ ಭೂತೇಷು
ತೃಷ್ಣಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||8||

ಯಾ ದೇವಿ ಸರ್ವ ಭೂತೇಷು
ಕ್ಷಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||9||

ಯಾ ದೇವಿ ಸರ್ವ ಭೂತೇಷು
ಜಾತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||10||

ಯಾ ದೇವಿ ಸರ್ವ ಭೂತೇಷು 
ಲಜ್ಜಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||11||

 ಯಾ ದೇವಿ ಸರ್ವ ಭೂತೇಷು  ಶಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||12||

ಯಾ ದೇವಿ ಸರ್ವ ಭೂತೇಷು  ಶ್ರದ್ಧಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||13||

ಯಾ ದೇವಿ ಸರ್ವ ಭೂತೇಷು  ಕಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||14||

ಯಾ ದೇವಿ ಸರ್ವ ಭೂತೇಷು  ಲಕ್ಷ್ಮಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||15||

ಯಾ ದೇವಿ ಸರ್ವ ಭೂತೇಷು  ವೃತ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||16||

ಯಾ ದೇವಿ ಸರ್ವ ಭೂತೇಷು  ಸ್ಮೃತೀ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||17||

ಯಾ ದೇವಿ ಸರ್ವ ಭೂತೇಷು  ದಯಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||18||

ಯಾ ದೇವಿ ಸರ್ವ ಭೂತೇಷು  ತುಷ್ಟಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||19||

ಯಾ ದೇವಿ ಸರ್ವ ಭೂತೇಷು  ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||20||

ಯಾ ದೇವಿ ಸರ್ವ ಭೂತೇಷು  ಭ್ರಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||21||

.........................................................................................

 

ಸರಳ ಸುಭಾಷಿತಗಳು(ಅರ್ಥ ಸಹಿತ)- 8 |SUBHASHITAS WITH MEANING -8

 

1.   अभिवादनशीलस्य नित्यं वृद्धॊपसेविन:

चत्वारि तस्य वर्धन्ते आयुर्विद्या यशो धनम्॥

ಅಭಿವಾದನ ಶೀಲಸ್ಯ ನಿತ್ಯ೦ ವೃದ್ಧೋಪಸೇವಿನ:

ಚತ್ವಾರಿ ತಸ್ಯ ವರ್ಧನ್ತೇ ಆಯುರ್ವಿದ್ಯಾ ಯಶೋ ಧನಮ್॥

 ಅರ್ಥ:    ಪ್ರತಿದಿನವೂ ಗುರುಹಿರಿಯರ ಸೇವೆಯನ್ನು ಮಾಡುತ್ತಾಅವರಿಗೆ ನಮಸ್ಕಾರಗಳನ್ನು ಮಾಡುತ್ತಿರುವ ವ್ಯಕ್ತಿಗೆ ಆಯಸ್ಸು,ವಿದ್ಯೆ,ಯಶಸ್ಸು ಮತ್ತು ಧನ ಈ ನಾಲ್ಕೂ ಸಂಪತ್ತುಗಳು ವೃದ್ಧಿಯಾಗುತ್ತವೆ.

 

 

2.   आलस्यं हि मनुष्याणां शरीरस्थॊ महान् रिपु: । 

नास्त्युद्यम समॊ बन्धु: कुर्वाणॊ नावसीदति॥

ಆಲಸ್ಯಮ್ ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು: |

ನಾಸ್ತ್ಯುದ್ಯಮಸಮೋ ಬಂಧು: ಕುರ್ವಾಣೋ ನಾವಸೀದತಿ ||

 ಅರ್ಥ:   ಆಲಸ್ಯವು ಮನುಷ್ಯನ ಶರೀರದಲ್ಲಿ ನೆಲೆಸಿದ ಮಹಾಶತ್ರು.ಉದ್ಯೋಗ-ಪ್ರವೃತ್ತಿಯಂತಹ ಬಂಧುವು ಇನ್ನೊಬ್ಬನಿಲ್ಲ. ಉದ್ಯೋಗಶೀಲನಾದ ಮನುಷ್ಯನಿಗೆ ಯಶಸ್ಸು, ಕೀರ್ತಿ, ಹಣ ಸುಖ ಸಿಗುತ್ತದೆ.

 

3.   अञ्जलिस्थानि पुष्पाणि वासयन्ति करद्वयम्।

अहॊ सुमनसां प्रीतिर्वामदक्षिणयॊ: समा॥

 ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್।

ಅಹೋ ಸುಮನಸಾ೦ ಪ್ರೀತಿರ್ವಾಮ ದಕ್ಷಿಣಯೋ: ಸಮಾ॥

ಅರ್ಥ:  ಕೈಯಲ್ಲಿ ಹಿಡಿದಿರುವ ಪುಷ್ಪವು ತನ್ನ್ನನ್ನು ಹಿಡಿದಿರುವ ಎರಡೂ ಕೈಗಳನ್ನು ಸುವಾಸಿತವನ್ನಾಗಿಸುತ್ತದೆ. ಅಂತೆಯೇ ಸಜ್ಜನರು ಎಲ್ಲಾ ಜನರನ್ನು ಒಂದೇ ಪ್ರೀತಿಯಿಂದ ನೋಡುತ್ತಾರೆ.

 

4.   अनुगन्तुं सतां धर्म कृत्स्नम् यदि न शक्यते।

स्वल्पमपि अ नुगन्तव्यं  मार्गस्तॊ नावसीदति॥

 ಅನುಗಂತುಂ ಸತಾಂ ಧರ್ಮ ಕೃತ್ಸ್ನ೦ ಯದಿ ನ ಶಕ್ಯತೆ।

ಸ್ವಲ್ಪಮಪಿ ಅನುಗಂತವ್ಯ೦ ಮಾರ್ಗಸ್ತೋ ನಾವಸೀದತಿ॥

ಅರ್ಥ:   ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು. ಹಾಗೆ ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದಲ್ಲಿ ಸ್ವಲ್ಪವಾದರೂ ಅವರನ್ನು ಅನುಸರಿಸಬೇಕು. ಆ ಮಾರ್ಗವನ್ನು ಅನುಸರಿಸುವವರು ನಾಶವನ್ನು ಹೊಂದುವುದಿಲ್ಲ.

 

5.  अन्य क्षेत्रे कृतं पापं पुण्यक्षेत्रे प्रणश्यति।

पुण्यक्षेत्रे कृतं पापं वज्रलेपो भविष्यति||

          ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ಪ್ರಣಶ್ಯತಿ।

ಪುಣ್ಯಕ್ಷೆತ್ರೇ ಕೃತ೦ ಪಾಪ೦ ವಜ್ರಲೇಪೋ ಭವಿಷ್ಯತಿ॥

ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ ಪಾಪಗಳನ್ನು ಪುಣ್ಯಕ್ಷೇತ್ರಕ್ಕೆ ಹೋಗಿ ಕಳೆದು ಕೊಳ್ಳಬಹುದು. ಆದರೆ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿಯೂ ಪಾಪ ಮಾಡಿದರೆ ಆ ಪಾಪವು ವಜ್ರಲೇಪದಂತೆ ಶಾಶ್ವತವಾಗಿರುತ್ತದೆ.

 

6. हस्तस्य भूषणं दानं सत्यं कण्ठस्य भूषणम्।

श्रोत्रस्य भूषणं शास्त्रं भूष्हणै: किं प्रयोजनम्॥

 ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।

ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥

 ಕೈಗೆ ದಾನವೇ ಆಭರಣ,ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ. ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ. ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?

 

7.  मातृवत् परदारॆषु परद्रव्यॆषु लोष्टवत् ।

आत्मवत् सर्व भूतेषु य: पश्यति स: पण्डित: ॥

      ಮಾತೃವತ್ ಪರದಾರೇಷು ಪರದ್ರವ್ಯೇಷು ಲೊಷ್ಟವತ್ ।

ಆತ್ಮವತ್ ಸರ್ವ ಭೂತೇಷು ಯ: ಪಶ್ಯತಿ ಸ: ಪಂಡಿತ: ||

ಪರಸ್ತ್ರೀಯರನ್ನು ತಾಯಿಯಂತೆ , ಪರದ್ರವ್ಯವನ್ನು ಮಣ್ಣಿನಂತೆ ,ಎಲ್ಲಾ ಜೀವಿಗಳನ್ನು ತನ್ನಂತೆ ಕಾಣುವವನು ಪಂಡಿತ ನು.

 

 8. यथा चित्तं तथा वाच: यथा वाचस्तथा क्रिया ।

चित्ते वाचि क्रियायां च साधूनामेकरूपता॥

     ಯಥಾ ಚಿತ್ತ0 ತಥಾ ವಾಚ: ಯಥಾ ವಾಚಸ್ತಥಾ ಕ್ರಿಯಾ।

ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕರೂಪತಾ॥

 ಸಜ್ಜನರು ಮನಸ್ಸಿನಲ್ಲಿರುವುದನ್ನೇ ಹೊರಗೆ ಮಾತುಗಳಲ್ಲಿ ತೋರಿಸುತ್ತಾರೆ. ಮಾತಿನಂತೆ ಅವರ ಕೃತಿಯೂ ಇರುತ್ತದೆ. ಮನಸ್ಸು ,ಮಾತು, ಕೃತಿಗಳಲ್ಲಿ ಅವರು ಯಾವಾಗಲೂ ಒಂದೇ ಬಗೆಯಾಗಿ ಇರುತ್ತಾರೆ.

............................................................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...