ಶಾಲಾ ಪ್ರಾರ್ಥನೆ : ಯಂ ಶೈವಾ ಸಮುಪಾಸತೇ (SCHOOL PRAYER: YAM SHAIVA SAMUPASATE LYRICS)

     ಶಾಲಾ ಪ್ರಾರ್ಥನೆ ಯಂ ಶೈವಾ ಸಮುಪಾಸತೇ


ಯಂ ಶೈವಾ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನ:

ಬೌದ್ಧ ಬುದ್ಧ ಇತಿ ಪ್ರಮಾಣ  ಪಟವ: , ಕರ್ತೇತಿ ನೈಯಾಯಿಕಾ ||

ಅರ್ಹನ್ನಿತ್ಯಥ ಜೈನ ಶಾಸನ ರತಾ: , ಕರ್ಮೇತಿ ಮೀಮಾಂಸಕಾ:

ಸೋಯಂ ವೋ ವಿದಧಾತು ವಾಂಛಿತಫಲಂ, ತ್ರೈಲೋಕ್ಯನಾಥೋ ಹರಿ ||

 

ಅರ್ಥ:

ಶೈವರು ಶಿವನೆಂದು, ವೇದಾಂತಿಗಳು ಬ್ರಹ್ಮವೆಂದು, ಬೌದ್ಧರು ಬುದ್ಧನೆಂದು, ವಿಚಾರ ಪಟುಗಳಾದ ನೈಯಾಯಿಕರು  ಕರ್ತೃವೆಂದು, ಜೈನ ಶಾಸನವನ್ನು ಅನುಸರಿಸುವವರು ಅರ್ಹತ್ ಎಂದು, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸಿಸುವರೋ ಅಂತಹ ತ್ರೈಲೋಕ್ಯ ನಾಥನಾದ ಹರಿಯು ನಿಮ್ಮ ಇಷ್ಟ ಫಲಗಳನ್ನು ನೀಡಲಿ.


.......................................................................

ಹಾಡಲು ಕಲಿಯಿರಿ(LEARN HOW TO SING THIS SONG)


YAM SHAIVA SAMUPAASATE SHIVA ITHI
BRAHMETI VEDAANTINAHA
BOWDHA BUDHA ITHI PRAMAANA PATAVAHA
KARTHETI NAIYAAYIKAAHA

ARHANNITHYATHA JAINA SHAASANA RATHAA
KARMETI MEE MAAMSAKAA
SOYAM VO VIDHDHAATU VAANCHITHA PHALAM
TRAILOKYA NAATHO HARIHI||

......................................................................................................

Also see:


ಎಲ್ಲಿಹುವುದು ನಾ ಸೇರುವ ಊರು(ELLIHUDU NA SERUVA OORU- LYRICS)-ಕನ್ನಡ ಭಾವಗೀತೆ

 


ಎಲ್ಲಿರುವುದು ನಾ ಸೇರುವ ಊರು

(ಭಾವಗೀತೆ)

 

ಎಲ್ಲಿಹುವುದು ನಾ ಸೇರುವ ಊರು
ಬಲ್ಲಿಹರರಿಯದ ಯಾರೂ ಕಾಣದ
ಎಲ್ಲಿಯು ಸಿಗದಾ ಊರು ಆಆಆ..||

 ಭವಭಯವಿಲ್ಲದ ಊರಂತೆ ವಿವಿಧರು ಬಯಸುವ ಊರಂತೆ (2 ಸಲ)
ತವರೂರಂತೆ ಬಲುದೂರಂತೆ, ತವರೂರಂತೆ ಬಲುದೂರಂತೆ,
ಕವಿಗಳು ಕಂಡಿಹ ಊರಂತೆ||1||

 ಜ್ಞಾನಿಗಳಿರುವುದು ಆ ಊರು, ಜ್ಞಾನದ ಮೇರೆಯೆ ಆ ಊರು (2 ಸಲ)
ನಾನಿಹ ಊರು ಸಮೀಪದ ಊರು, ನಾನಿಹ ಊರು ಸಮೀಪದ ಊರು
ದೈವವೆ ಆಳುವ ತವರೂರು
||2||


ಹಾಡಲು ಕಲಿಯಿರಿ(LEARN HOW TO SING THIS SONG) 






YAAVA MOHANA MURALI KAREYITU(ಯಾವ ಮೋಹನ ಮುರಲಿ ಕರೆಯಿತು) SONG LYRICS IN KANNADA

 


ಯಾವ ಮೋಹನ ಮುರಳಿ ಕರೆಯಿತು

(ಭಾವಗೀತೆ)

ರಚನೆ: ಎಂ. ಗೋಪಾಲಕೃಷ್ಣ ಅಡಿಗ

 

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು||

 

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ||1||

 

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ

ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ||2||

 

ವಿವಶವಾಯಿತು ಪ್ರಾಣ ಹಾ...

ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ||3||


..............................................................................................


ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...