Sep 29, 2020

ಸರಸ್ವತಿ ದೇವಿಯ ಶ್ಲೋಕಗಳು(LORD SARASWATI SHLOKA LYRICS IN KANNADA)

 

ಸರಸ್ವತಿ ದೇವಿಯ ಶ್ಲೋಕಗಳು

 

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ

ವಿದ್ಯಾರಂಭಮ್ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ||

  

ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರ ವಾಸಿನಿ

ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ದೇಹಿ ಮೇ||

 

ಯಾಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ

ಯಾ ವೀಣಾ ವರದಂಡ ಮಂಡಿತ ಕರಾ ಯಾ ಶ್ವೇತ ಪದ್ಮಾಸನಾ|

ಯಾ ಬ್ರಹ್ಮಾಚ್ಯುತ ಶಂಕರ ಪ್ರಭ್ರತಿಭಿ: ದೇವೈ ಸದಾ ಪೂಜಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಯೇಷ ಜಾಡ್ಯಾಪಹಾ||


ಸರಸ್ವತಿ ಮಹಾಭಾಗೇ ವಿದ್ಯೇ ಕಮಲ ಲೋಚನೆ |

ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ಬುದ್ಧಿಂ ದೇಹಿ ಮೇ


ಹಾಡಲು ಕಲಿಯಿರಿ(LEARN HOW TO SING THIS SONG)

Also see :


Sep 20, 2020

ಸರಳ ಸುಭಾಷಿತಗಳು (ಅರ್ಥ ಸಹಿತ)– 3| SUBHASHITAS WITH KANNADA MEANING -3

 

                            ಸರಳ ಸುಭಾಷಿತಗಳು – 3


ಅನ್ನದಾನಂ ಪರಂ ದಾನಂ ವಿದ್ಯಾದಾನಮತ: ಪರಂ|
ಅನ್ನೇನ ಕ್ಷಣಿಕಾ ತೃಪ್ತಿ: , ಯಾವಜ್ಜೀವಂ ವಿದ್ಯಯಾ||

(ಅನ್ನ ದಾನವು ಶ್ರೇಷ್ಠ ದಾನವು. ಅದಕ್ಕೂ ಶ್ರೇಷ್ಠವಾದುದು ವಿದ್ಯಾದಾನ.ಅನ್ನದಾನ ದಿಂದ ಆಗುವ ತೃಪ್ತಿಯು ಕ್ಷಣಿಕವಾದುದು. ಆದರೆ ವಿದ್ಯೆಯಿಂದ ಬರುವ ತೃಪ್ತಿಯು ಜೀವವಿರುವ ವರೆಗೂ ಉಳಿಯುವುದು.)

 ಕಾಕ: ಕೃಷ್ಣ: ಪಿಕ: ಕೃಷ್ಣ: ಕೋ ಭೇದ: ಪಿಕಕಾಕಯೋ: |
ವಸಂತಸಮಯೇ ಪ್ರಾಪ್ತೇ ಕಾಕ: ಕಾಕ: ಪಿಕ:ಪಿಕ: ||

(ಕಾಗೆಯು ಕಪ್ಪಗೆ ಇರುವುದು. ಕೋಗಿಲೆಯೂ ಕಪ್ಪಾಗಿ ಇರುವುದು. ಇವೆರಡನ್ನು ಬೇರೆ ಬೇರೆಯಾಗಿ ತಿಳಿದುಕೊಳ್ಳುವುದು ಹೇಗೆ? ವಸಂತ ಋತು ಬಂದೊಡನೆ ಎರಡು ಪಕ್ಷಿಗಳು ಕೂಗುವವು. ಆ ಕಾಲಕ್ಕೆ ಸ್ವರ ಭೇದದಿಂದ ನಾವು ಎರಡನ್ನೂ ಗುರುತಿಸಬಹುದು. ಕೋಗಿಲೆ ಇಂಪಾಗಿ ' ಕುಹೂ ಕುಹೂ' ಎಂದು ಕುಕಿಲುವುದು, ಕಾಗೆಯು ಕರ್ಕಶವಾಗಿ ಒದರುವುದು)

 ಹಂಸ: ಶ್ವೇತ: ಬಕ: ಶ್ವೇತ: ಕೋ ಭೇದೋ ಬಕ ಹಂಸಯೋ: ನೀರಕ್ಷೀರವಿವೇಕೇ ತು ಹಂಸೋ ಹಂಸ: ಬಕೋ ಬಕ: ||

(ಹಂಸ ಪಕ್ಷಿ ಬೆಳ್ಳಗಿರುತ್ತದೆ; ಬಕಪಕ್ಷಿಯೂ ಬೆಳ್ಳಗಿರುತ್ತದೆ. ಇವೆರಡನ್ನು ವಿಂಗಡಿಸಿ ಹೇಳುವುದು ಹೇಗೆ? ನೀರನ್ನು ಹಾಲಿನಿಂದ ಬೇರ್ಪಡಿಸುವ ಪ್ರಸಂಗದಲ್ಲಿ ಮಾತ್ರ ಹಂಸ – ಬಕಗಳನ್ನು ನಾವು ಗುರುತಿಸಬಹುದು. ಹಾಲು - ನೀರಿನ ಮಿಶ್ರಣದಿಂದ ಹಂಸವು ಹಾಲನ್ನ ಷ್ಟೇ ಹೀರಿ ಕೊಳ್ಳುವುದೆಂದು ಕವಿ ಸಮಯವಿದೆ.)


ಸಾಹಿತ್ಯದೊಂದಿಗೆಹಾಡಲು ಕಲಿಯಿರಿ (LEARN TO SING WITH LYRICS)

Also See:

ಸರಳ ಸುಭಾಷಿತಗಳು – 1| SUBHASHITAS WITH KANNADA MEANING

ಸರಸ್ವತಿ ದೇವಿಯ ಶ್ಲೋಕಗಳು(LORD SARASWATI SHLOKA LYRICS IN KANNADA)

ಸರಳ ಸುಭಾಷಿತ- ಆರಂಭ ಗುರ್ವೀ ಕ್ಷಯಿಣೀ ಕ್ರಮೇಣಾ (ಸಜ್ಜನ -ದುರ್ಜನ ಸ್ನೇಹ ವ್ಯತ್ಯಾಸ)ARAMBHA GURVI KSHAYINI LYRICS AND MEANING

Sep 19, 2020

ಕೈ ಬೆರಳುಗಳು (FINGER NAMES IN KANNADA)

 

ಕೈ ಬೆರಳುಗಳು

FINGER NAMES IN KANNADA



1.   ಹೆಬ್ಬೆರಳು (THUMB FINGER)

2.  ತೋರು ಬೆರಳು (INDEX FINGER)

3.  ಮಧ್ಯ ಬೆರಳು (MIDDLE FINGER)

4. ಉಂಗುರ ಬೆರಳು (RING FINGER)

5.  ಚಿಕ್ಕ ಬೆರಳು (LITTLE FINGER)



Sep 13, 2020

ಭಾಗ್ಯದ ಲಕ್ಷ್ಮಿ ಬಾರಮ್ಮ (BHAGYADA LAKSHMI BAARAMMA)SONG LYRICS IN KANNADA


 

ಭಾಗ್ಯದ ಲಕ್ಷ್ಮಿ ಬಾರಮ್ಮ 

 

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ

ಸೌಭಾಗ್ಯದ ಲಕ್ಷ್ಮಿ ಬಾರಮ್ಮ||


 ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ

ಗೆಜ್ಜೆ ಕಾಲ್ಗಳ ನಾದವ ತೋರುತ

ಸಜ್ಜನ ಸಾಧು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ ||1||

 

ಕನಕ ವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆಯುವ

ಜನಕರಾಯನ ಕುಮಾರಿ ಬಾರೆ||2||

 

ಅತ್ತಿತ್ತಗಲದೆ ಭಕ್ತರ ಮನೆಯಲಿ

ನಿತ್ಯ ಮಹೋತ್ಸವ ನಿತ್ಯ ಸುಮಂಗಲ

ಸತ್ಯಕೆ ತೋರುವ ಸಾಧು ಸಜ್ಜನರ

ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ||3||

 

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು

ಕಂಕಣ ಕೈಯ ತಿರುವುತ ಬಾರೆ

ಕುಂಕುಮಾಂಕಿತೆ ಪಂಕಜಲೋಚನೆ

ವೆಂಕಟರಮಣನ ಬಿಂಕದ ರಾಣಿ||4||

 

ಸಕ್ಕರೆ ತುಪ್ಪದ ಕಾಲುವೆ ಹರಿಸಿ

ಶುಕ್ರವಾರದ ಪೂಜೆಯ ವೇಳೆಗೆ

ಅಕ್ಕರೆಯುಳ್ಳ ಅಳಗಿರಿ ರಂಗನ

ಚೊಕ್ಕ ಪುರಂದರ ವಿಠಲನ ರಾಣಿ||5||



Sep 9, 2020

ಒಂದು ಕಾಗೆ ಬಂದಿತು(ಶಿಶುಗೀತೆ) ONDU KAAGE BANDITU , KANNADA RHYME LYRICS

 

                                                            (ಶಿಶುಗೀತೆ)

ಒಂದು ಕಾಗೆ ಬಂದಿತು

ಎರಡು ಕಾಳು ತಿಂದಿತು

ಮೂರು ಮೊಟ್ಟೆ ಇಟ್ಟಿತು

ಆಮೇಲೇ....

ನಾಲ್ಕು ಸಲ ಕೂಗಿತು

ಕಾ ಕಾ ಕಾ ಕಾ

ಐದು ಸಲ ಹಾರಿತು

ಕಾ ಕಾ ಕಾ ಕಾ ಕಾ

.................................................................................................................................................

ಹಾಡಲು ಕಲಿಯಿರಿ(CLICK HERE TO LEARN THIS SONG)

ENGLISH LYRICS:

ONDU KAAGE BANDITU,

ERADU KAALU(GRAIN) TINDITU

MOORU MOTTE ITTITU,

AAMELE……….

NAALKU SALA KOOGITU

KAA,KAA,KAA,KAA

AIDU SALA HAARITU

KAA,KAA,KAA,KAA,KAA

.................................................................................................................................

Also See:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಶಾಂತಿ ಮಂತ್ರಗಳು (ಅರ್ಥ ಸಹಿತ) |SHANTI MANTRAS WITH MEANING


Sep 1, 2020

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

 


ಭಗವದ್ಗೀತೆ ಶ್ಲೋಕಗಳು

ಶ್ರೀ ಭಗವಾನ್ ಉವಾಚ:

1.   ಪರಿತ್ರಾಣಾಯ ಸಾಧೂನಾಂ ವಿನಾಶಾಯ ದುಷ್ಕ್ರತಾಮ್
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||                             (ಅಧ್ಯಾಯ)

(ಅರ್ಥ: ಸಾಧು ಪುರುಷರನ್ನುಉದ್ಧರಿಸುವುದಕ್ಕಾಗಿ, ಪಾಪ ಕರ್ಮ ಮಾಡುವವರನ್ನು ವಿನಾಶ ಮಾಡಲಿಕ್ಕಾಗಿ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿ ನಾನು ಯುಗ – ಯುಗಗಳಲ್ಲಿಪ್ರಕಟನಾಗುತ್ತೇನೆ)

2.   ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
    ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||                      (ಅಧ್ಯಾಯ)

( ಅರ್ಥ: ಎಲೈ ಭಾರತ, ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ. ಅರ್ಥಾತ್ ಸಾಕಾರ ರೂಪದಿಂದ ಜನರ ಮುಂದೆ ಪ್ರಕಟನಾಗುತ್ತೇನೆ . ಭರತ ವಂಶದಲ್ಲಿ ಹುಟ್ಟಿದ್ದರಿಂದ ಅರ್ಜುನನನ್ನು ಇಲ್ಲಿ ಶ್ರೀಕೃಷ್ಣನು 'ಭಾರತ' ಎಂದು ಕರೆಯುತ್ತಾನೆ)

3.   ಸುಖ ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾಜಯೌ
ತತೋ ಯುದ್ದಾಯ ಯುಜ್ಯಸ್ವ ನೈವ೦ ಪಾಪಮವಾಪ್ಸ್ಯಸಿ|               (ಅಧ್ಯಾಯ)

( ಅರ್ಥ: ಜಯ - ಪರಾಜಯ, ಲಾಭ - ಹಾನಿ ಮತ್ತು ಸುಖ - ದುಃಖ ಇವುಗಳನ್ನು ಸಮಾನವಾಗಿ ತಿಳಿದುಕೊಂಡು ಯುದ್ಧಕ್ಕೆ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡಿದರೆ ನಿನಗೆ ಪಾಪವು ತಟ್ಟಲಾರದು)

.........................................................................................................................


Also see: