ಊಟಕ್ಕೆ ಬಂದೆವು ನಾವು
ರಚನೆ : ಪುರಂದರದಾಸರು
ಊಟಕ್ಕೆ
ಬಂದೆವು ನಾವು ನಿಮ್ಮ
ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ||
ಕತ್ತಲಿಟ್ಟಾವಮ್ಮ ಕಣ್ಣುಬಾಯಿ
ಬತ್ತಿ
ಬರುತಲಿದೆ ಕೈ ಕಾಲು ಝುಮ್ಮ
ಹೊತ್ತು
ಹೋಗಿಸಬೇಡವಮ್ಮ
ಒಂದು ತುತ್ತಾದರು
ಇತ್ತು ಸಲಹು ನಮ್ಮಮ್ಮ||1||
ಒಡಲೊಳಗೆ
ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ
ದೋಷ ತಟ್ಟುವುದು
ಒಂದು ಹಿಡಿಯಕ್ಕಿಯಿಂದಲೆ
ಕೀರ್ತಿ ಬಾಹೋದು||2||
ಹೊನ್ನ
ರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ
ತಂದು ಧಾರೆಯನೆರೆಯೆ
ಅನ್ನ ದಾನಕ್ಕಿನ್ನು
ಸರಿಯೆ ಪ್ರ..
ಸನ್ನ ಪುರಂದರ
ವಿಠ್ಠಲ ದೊರೆಯೆ||3||
...........................................................................................................
No comments:
Post a Comment