Feb 3, 2021

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

 

ಏಳು ಮಲೆಯಲ್ಲಿ ಏನಯ್ಯ ಕೆಂಧೂಳು

ಏಳು ಮಲೆಯಲ್ಲಿ ಏನಯ್ಯ ಕೆಂಧೂಳು

ನವಿಲಾರಿ ನೌಲ ಮರಿಯಾರಿ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ನವಿಲಾರಿ ನೌಲ ಮರಿಯಾರಿ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯಾ ಓಹೋ ಚೆಲ್ಲಿದರು ಮಲ್ಲಿಗೆಯಾ|

ನವಿಲಾರಿ ನೌಲ… ಮರಿಯಾರಿ ಮಾದೇವ್ಗೆ

ನವಿಲಾರಿ ನೌಲ… ಮರಿಯಾರಿ ಮಾದೇವ್ಗೆ

ಔತ್ನ ಮಾಡಿ ಗಿರಿಗೆ ಹೊರಟಾವು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಔತ್ನ ಮಾಡಿ ಗಿರಿಗೆ ಹೊರಟಾವು ಮಾದೇವ್ಗೆಚೆಲ್ಲಿದರು ಮಲ್ಲಿಗೆಯಾ

 ಓಹೋ ಚೆಲ್ಲಿದರು ಮಲ್ಲಿಗೆಯಾ||1||

 

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

 

ಮಲ್ಲೆ ಹೂವಿನ ಮಂಚ ಮರುಗದ ಮೇಲ್ ಹೊದಿಕೆ

ಮಲ್ಲೆ ಹೂವಿನ ಮಂಚ ಮರುಗದ ಮೇಲ್ ಹೊದಿಕೆ

ತಾವರೆ ಹೂವ ತಲೆದಿಂಬ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ತಾವರೆ ಹೂವ ತಲೆದಿಂಬ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ|

ತಾವರೆ ಹೂವ… ತಲೆದಿಂಬ ಮಾದೇವ್ಗೆ

ತಾವರೆ ಹೂವ ..ತಲೆದಿಂಬ ಮಾದೇವ್ಗೆ

ಅಲ್ಲೊಂದು ಘಳಿಗೆ ಸುಖನಿದ್ರೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಅಲ್ಲೊಂದು ಘಳಿಗೆ ಸುಖನಿದ್ರೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ|

 

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

....................................................................................................

Also See:

ಶಿವ ಶಿವ ಎನ್ನುತ ಹಾಡಲು ಮನದಲಿ (SHIVA SHIVA ENNUTHA HAADALU SONG LYRICS)


ಕೋಡಗನ ಕೋಳಿ ನುಂಗಿತ್ತ (KODAGANA KOLI NUNGITA) SONG LYRICS IN KANNADA

No comments:

Post a Comment