Mar 22, 2021

ಈ ಹಸಿರು ಸಿರಿಯಲಿ ಮನಸು ಮೆರೆಯಲಿ(ನಾಗಮಂಡಲ) |EE HASIRU SIRIYALI (NAGAMANDALA FILM) SONG LYRICS IN KANNADA

 ಸಾಹಿತ್ಯ: ಗೋಪಾಲ್ ಯಾಗ್ನಿಕ್

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ... ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ ನವಿಲೇ.. ನವಿಲೆ||

ಈ ನೆಲದ ನೆಲೆಯಲಿ ಮನಸು ಕುಣಿಯಲಿ
ನವಿಲೇ...ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ ನವಿಲೇ.. ನವಿಲೆ||

ತಂಗಾಳಿ ಬೀಸಿ ಬರದೆ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ||1||

ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ 

ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ

ಸುರಲೋಕಾ ಇದನು ಬಿಡಲೇ ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ||2||

.................................................

Also see:

ಕಂಬದ ಮ್ಯಾಲಿನ ಗೊಂಬೆಯೇ | KAMBADA MYALINA GOMBEYE LYRICS

ವೆಂಕಟರಮಣನೆ ಬಾರೋ (VENKATARAMANANE BAARO ), SONG ON LORD VISHNU - LYRICS IN KANNADA AND ENGLISH

Mar 17, 2021

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ|AKASHAKKEDDU NINTA SONG LYRICS IN KANNADA

 

ರಚನೆ: ಕೆ . ಎಸ್ . ನರಸಿಂಹಸ್ವಾಮಿ

 ಹಾಡಲು ಕಲಿಯಿರಿ(CLICK HERE TO LEARN THIS SONG)

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ

ಕರಾವಳಿಗೆ ಮುತ್ತನಿಡುವ ಬೆಬ್ಬೆರೆಗಳ ಗಾನದಲ್ಲಿ

ಬಯಲ ತುಂಬಾ ಹಸಿರು ದೀಪ ಹಚ್ಚಿ ಹರಿವ ನದಿಗಳಲ್ಲಿ

ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷ ಹೇಳುವಲ್ಲಿ

ಕಣ್ಣು ಬೇರೆ ನೋಟ ಒಂದು ನಾವು ಭಾರತೀಯರು||

 

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ

ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ

ಒಂದೆ ನೆಲದ ತೊಟ್ಟಿಲಿನಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ

ನಮ್ಮ ಯುಗದ ದನಿಗಳಾಗಿ ಮೂಡಿತೆಲ್ಲ ಹಾಡಿನಲ್ಲಿ

ಭಾಷೆ ಬೇರೆ ಭಾವ ಒಂದು ನಾವು ಭಾರತೀಯರು||1||

 

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ

ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ

ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ

ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ

ಎಲ್ಲೆ ಇರಲಿ ನಾವು ಒಂದು ನಾವು ಭಾರತೀಯರು||2||

...................................................................................................

Also see:

ಕನ್ನಡ ಕಲಿ- ಪಂಚೇಂದ್ರಿಯಗಳು|LEARN KANNADA - SENSE ORGANS| KANNADA SAVIGANA BLOGSPOT

ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA


Mar 15, 2021

ನೀನಿಲ್ಲದೇ ನನಗೇನಿದೇ|NEENILLADE NANAGENIDE SONG LYRICS IN KANNADA

 ಭಾವಗೀತೆ

ನೀನಿಲ್ಲದೇ ನನಗೇನಿದೇ
ಮನಸೆಲ್ಲ ನಿನ್ನಲ್ಲಿ ನೆಲೆಯಾಗಿದೆ
ಕನಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ||1||


ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ||2||

.........................................

ಹಾಡಲು ಕಲಿಯಿರಿ(CLICK HERE TO LEARN THIS SONG)


Also See:


Mar 10, 2021

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA ,NAGENDRA HARAYA SONG LYRICS IN KANNADA

 

ಶಿವ ಪಂಚಾಕ್ಷರಿ ಸ್ತೋತ್ರ

ರಚನೆ : ಶ್ರೀ ಶಂಕರಾಚಾರ್ಯ

ಹಾಡಲು ಕಲಿಯಿರಿ(CLICK HERE TO LEARN THIS SONG)

ನಾಗೇಂದ್ರ ಹಾರಾಯ ತ್ರಿಲೋಚನಾಯ

ಭಸ್ಮಾಂಗ ರಾಗಾಯ ಮಹೇಶ್ವರಾಯ|

ನಿತ್ಯಾಯ ಶುದ್ಧಾಯ ದಿಗಂಬರಾಯ

ತಸ್ಮೈ ನಕಾರಾಯ ನಮಃ ಶಿವಾಯ||1||

 

ಮಂದಾಕಿನಿ ಸಲಿಲ ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ ಮಹೇಶ್ವರಾಯ|

ಮಂದಾರ ಪುಷ್ಪ ಬಹು ಪುಷ್ಪ ಸುಪೂಜಿತಾಯ

ತಸ್ಮೈ ಕಾರಾಯ ನಮಃ ಶಿವಾಯ||2||

 

ಶಿವಾಯ ಗೌರಿ ವದನಾಬ್ಜ ಬಾಲ

ಸೂರ್ಯಾಯ ದಕ್ಷಾಧ್ವರ ನಾಶಕಾಯ|

ಶ್ರೀ ನೀಲಕಂಠಾಯ ವೃಷಧ್ವಜಾಯ

ತಸ್ಮೈ ಶಿಕಾರಾಯ ನಮಃ ಶಿವಾಯ||3||

 

ವಸಿಷ್ಠಕುಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ|

ಚಂದ್ರಾರ್ಕ ವೈಶ್ವಾನರ ಲೋಚನಾಯ

ತಸ್ಮೈ ಕಾರಾಯ ನಮಃ ಶಿವಾಯ||4||

 

 ಯಜ್ಞ ಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ

ದಿವ್ಯಾಯ ದೇವಾಯ ದಿಗಂಬರಾಯ

ತಸ್ಮೈ ಯಕಾರಾಯ ನಮಃ ಶಿವಾಯ||5||

....................................................................................

Also see:

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA

ಈಶ್ವರ ಶ್ಲೋಕಗಳು|SHLOKAS ON LORD SHIVA LYRICS|

Mar 3, 2021

ಕನ್ನಡ ಕಲಿ- ಪಂಚೇಂದ್ರಿಯಗಳು|LEARN KANNADA - SENSE ORGANS| KANNADA SAVIGANA BLOGSPOT

 

ಪಂಚೇಂದ್ರಿಯಗಳು(SENSE ORGANS)


 1. ಕಣ್ಣು - EYE

2. ಕಿವಿ - EAR

3. ಮೂಗು - NOSE

4. ನಾಲಿಗೆ - TONGUE

5.ಚರ್ಮ - SKIN

..........................................................