Jul 29, 2021

ಸರಳ ಸುಭಾಷಿತಗಳು(ಅರ್ಥ ಸಹಿತ)- 5| SUBHASHITA WITH MEANING - 5

 ಸರಳ ಸುಭಾಷಿತಗಳು(ಅರ್ಥ ಸಹಿತ)- 5| SUBHASHITA WITH MEANING - 5


 1. ರವಿ ಚಂದ್ರ ಘನಾ ವೃಕ್ಷಾ ನದೀ ಗಾವಶ್ಚ ಸಜ್ಜನಾ:

    ಏತೇ ಪರೋಪಕಾರಾಯ ಯುಗೇ ದೇವೇನ ನಿರ್ಮಿತಾ: ||

  ಅರ್ಥ: ಸೂರ್ಯ,ಚಂದ್ರ, ಮೋಡಗಳು, ನದಿ, ಗಿಡಗಳು,ಆಕಳು,ಸಜ್ಜನರು

ಇವರೆಲ್ಲ ಪರೋಪಕಾರಕ್ಕಾಗಿ ದೇವರಿಂದ ನಿರ್ಮಿಸಲ್ಪಟ್ಟಿರುವುದು.

 

 2. ಗುಣಾ: ಸರ್ವತ್ರ ಪೂಜ್ಯಂತೇ ಪಿತೃ ವಂಶೋ ನಿರರ್ಥಕ:

    ವಾಸುದೇವಂ ನಮಸ್ಯoತಿ ವಸುದೇವ೦ ಮಾನವಾ: ||

 ಅರ್ಥ: ಸದ್ಗುಣಿಗಳಿಗೆ ವಿಶೇಷ ಮನ್ನಣೆಯುಂಟು. ತಂದೆಯ ಹೆಗ್ಗಳಿಕೆಯನ್ನು ಹೇಳಿಕೊಳ್ಳುವುದು ವ್ಯರ್ಥ. ಜಗತ್ತಿನಲ್ಲಿ ಜನರು ವಾಸುದೇವನನ್ನು(ಕೃಷ್ಣ) ನಮಿಸುವರೇ ಹೊರತು, ಅವನ ತಂದೆಯಾದ ವಸುದೇವನನ್ನಲ್ಲ.

 

3. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್

ಕ್ಷಣ ತ್ಯಾಗೇ ಕುತೋ ವಿದ್ಯಾ  ಕಣ ತ್ಯಾಗೇ ಕುತೋ ಧನಂ||

  ಅರ್ಥ: ವಿದ್ಯೆ ಹಾಗೂ ಧನವನ್ನು ಸ್ವಲ್ಪ ಸ್ವಲ್ಪವಾಗಿ ಎಲ್ಲಾ ಕಡೆಯಿಂದಲೂ ಗಳಿಸುತ್ತ ಹೋಗಬೇಕು. (ಹಾಗೆಯೇ ತೆನೆ ತೆನೆ ಕೂಡಿದರೆ ರಾಶಿ). ಒಂದೊಂದು ಕ್ಷಣವನ್ನು ವ್ಯರ್ಥವಾಗಿ ಕಳೆದರೆ ವಿದ್ಯೆ ಪ್ರಾಪ್ತವಾಗುವುದಿಲ್ಲ. ಅದೇ ರೀತಿ ಚೂರು ಚೂರೆಂದು ವ್ಯರ್ಥ ಖರ್ಚು ಮಾಡುತ್ತಾ ಹೋದರೆ ಸಿರಿವಂತಿಕೆ ಹೇಗೆ ಬಂದೀತು?

.........................................................................................................................


Also see: 

Jul 25, 2021

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು (ಸಾಹಿತ್ಯ)| NAMMA MANEYANGALADI BELEDONDU HOOVANNU SONG LYRICS IN KANNADA

ಹಾಡಲು ಕಲಿಯಿರಿ(CLICK HERE TO LEARN THIS SONG)

 

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು 

ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು

ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು||


ಮರೆಮೋಸ ಕೊಂಕುಗಳನರಿಯಳಿವಳು 

ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು

ಸಲಹಿಕೊಳಿರಿಮಗಳ ಓಪ್ಪಿಸುವೆವು||

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ

ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು

ನಿಮ್ಮ ಕುಲವನು ಬೆಳಸೆ ಬಂದಿರುವಳು||

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ

ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ

ನಿಮ್ಮ ಕುಲಶೀಲಗಳು ಪರಿಮಳಿಸಲಿ||

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ

ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು

ಇವರ ದೇವರೆ ನಿನ್ನ ದೇವರುಗಳು||

ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು 

ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ

ತುಂಬಿದಾಯುಶ್ಯದಲಿ ಬಾಳಿ ಬದುಕು||

...........................................

Also see:


Jul 16, 2021

ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು

ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು     (2 ಸಲ)  

ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು  (2 ಸಲ)

ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು  (2 ಸಲ)

ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು||

 

ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು

ಲಲಲಲ ಲಲಲಲ ಲಲಲಲ ಲಾಲಾಲಾಲಾ

ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು

ಸೋಲು ಗೆಲುವಿನಲಿ ಸಮ ಚಿತ್ತದಿಂದಿರಲು (2 ಸಲ)

ಶತ್ರುಗಳಿಗೂ ಸನ್ಮಿತ್ರ ನಾಗಿರಲು ಕಲಿಸು (2 ಸಲ)

ಹಸಿರು ಮಲೆ ಹೂವಲಿ ನಾ ಧ್ಯಾನಿಸುವುದ ಕಲಿಸು

ಜಾಣನಾಗಲು ಕಲಿಸು, ಜಾಣನಾಗಲು ಕಲಿಸು||1||

 

ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು

ಲಲಲಲ ಲಲಲಲ ಲಲಲಲ ಲಾಲಾಲಾಲಾ

ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು

ಅಳುವಿನಲಿ ಅವಮಾನ ಇಲ್ಲವೆಂಬುದು ಕಲಿಸು

ನನ್ನನ್ನೆ ನಾ ನೋಡಿ ನಗುವುದನು ಕಲಿಸು

ಮಾನವಿಯತೆಯಲಿ ನಾ ಮರುಗುವುದನು ಕಲಿಸು  (2 ಸಲ)

ಮಾನವೀಯತೆಯಲಿ ನಾ ಕರಗುವುದು ಕಲಿಸು

ಜಾಣನಾಗಲು ಕಲಿಸು, ಜಾಣನಾಗಲು ಕಲಿಸು||2||

.......................................................................................................

Also See:

Jul 11, 2021

ಭತ್ತ ಭತ್ತ ಬೆಳೆಯುವಂತ ಭತ್ತದ ಬೀಡು |BHATHA BHATHA BELEYUVANTHA | KANNADA FOLK SONG WITH LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಭತ್ತ ಭತ್ತ ಬೆಳೆಯುವಂತ ಭತ್ತದ ಬೀಡು ನಾವ್

ಉತ್ತು ಬಿತ್ತು ಬೆಳೆಯೋ ನಮ್ಮ ಮುತ್ತಿನ್ ನಾಡು ||

 

ಬೀಸುತಿದೆ ಬಯಲಾಗೆ ಹೊಸ ಗಾಳಿ

ಹೊತ್ತು ತರುತಿದೆ ಹೊಸ ಹೊಸ ರಾಗಾವಳಿ

ರೆಕ್ಕೆ ಹಕ್ಕಿ ಅಂಬರದಾಗೆ ಹಾಡುತ್ತಾವೆ

ಭತ್ತ ಚಿಕ್ಕ ಚೊಕ್ಕ ಚುಕ್ಕಿ ಹಂಗೆ ಕಾಣುತ್ತಾವೆ

ಮೂರು ಲೋಕಕೆಲ್ಲ ದಾರಿ ತೋರುತ್ತಾನೆ ದೇವ

ಕೀರುತಿಯ ಹಾದಿಯನ್ನು ಸೇರುತ್ತಾನೆ||1||

 

ಭತ್ತ ಬಂತು ಭತ್ತ ಬಂತು ಭತ್ತ ಬನ್ನೂರ ಬಯಲಾಗೆ

ಬನ್ನೂರ ಬಯಲಾಗೆ ಬೆಳೆದವ್ರೆ ಬಿಳಿ ಭತ್ತ

ಬಂದು ನೋಡಿರೋ ಭತ್ತಾವ||2||

 

ಭಾರತಮ್ಮ ಪಾರ್ವತಮ್ಮ ಬಂದು ನೋಡು

ಬಂದು ಬಯಲಾಗೆ ಬೆಳೆದವ್ರೆ ಭತ್ತ ನೋಡು

ಬಾಗಿಲಲ್ಲಿ ಬಂದು ಬಿಳಿ ಭತ್ತ ನೋಡು

ಬಯಲು ಸೀಮೇಯ ಜಾಣೆ ನೀ ಬಂದು ನೋಡು||3||

.................................................................................................................

Also See:

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA

ಯೋಧರೇ ಬಯಸಿ ಬನ್ನಿ-ಸಾಹಿತ್ಯದೊಂದಿಗೆ ಹಾಡಲು ಕಲಿಯಿರಿ(YODHARE BAYASI BANNI- LEARN TO SING WITH LYRICS) PATRIOTIC SONG(DESHABHAKTIGEETE)

Jul 7, 2021

ಓ ನನ್ನ ಚೇತನ, ಆಗು ನೀ ಅನಿಕೇತನ|O NANNA CHETANA SONG LYRICS IN KANNADA AND ENGLISH

 

ನನ್ನ ಚೇತನ, ಆಗು ನೀ ಅನಿಕೇತನ

ನನ್ನ ಚೇತನ, ಆಗು ನೀ ಅನಿಕೇತನ||

 

ರೂಪ ರೂಪಗಳನು ದಾಟಿ ನಾಮಕೋಟಿಗಳನು ಮೀಟಿ

ಎದೆಯ ಬಿರಿಯೆ ಭಾವದೀಟಿ||1||

 

ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ||2||

 

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು||3||

 

ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಬಾ||4||

..................................................................................................

ಹಾಡಲು ಕಲಿಯಿರಿ(CLICK HERE TO LEARN THIS SONG)

..................................................................................................................

O NANNA CHETANA , AAGU NEE ANIKETANA

ROOPA ROOPAGALANU DAATI NAAMA KOTIGALANU MEETI

EDEYA BIRIYE BHAAVA DEETI ||1||


NOORU MATADA HOTTA TOORI ELLA TATWADELLE MEERI

NIRDIGANTAVAAGI ERI||2||


ELLIYU NILLADIRU MANEYANENDU KATTADIRU

KONEYANENDU MUTTADIRU 

O ANANTHA VAAGIRU||3||


ANANTHA THAAN ANANTHAVAAGI

 AAGUTHIHANE NITHYA YOGI

ANANTHA NEE ANANTH VAAGU

AAGU AAGU AAGU BAA||4||


.......................................................................................................

Also See:

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ |NINNA PREMADA PARIYA NANARIYE SONG LYRICS IN KANNADA AND ENGLISH

ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS

Jul 1, 2021

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ |NINNA PREMADA PARIYA NANARIYE SONG LYRICS IN KANNADA AND ENGLISH

 

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು...
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು ...ನಿನ್ನೋಳಿದೆ ನನ್ನ ಮನಸ್ಸು||

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ ...

ತೀರದಲಿ ಬಳುಕುವಲ್ಲೆ ಕಣ್ಣಚುಂಬಿಸಿ ಮತ್ತೆ

ಸಾಗುವುದು ಕನಸಿನಂತೆ ...ನಿನ್ನೋಳಿದೆ ನನ್ನ ಮನಸ್ಸು||1||


ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ....
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ... ನಿನ್ನೋಳಿದೆ ನನ್ನ ಮನಸ್ಸು||2||

..............................................

ಹಾಡಲು ಕಲಿಯಿರಿ(CLICK HERE TO LEARN THIS SONG)

.........................................

NINNA PREMADA PARIYA NAANARIYE KANKAANGI

NINNOLIDE NANNA MANASU...

HUNNIMEYA RAATRIYALI UKKUVUDU KADALAAGI

NINNOLUME NANNA KANDU .. NINNOLIDE NANNA MANASU||


SAAGARANA HRADAYADALI RATNA PARVATA MAALE

MINCHINALI MEEVUDANTHE...

TEERADALI BALUKUVALE KANNA CHUMBISI MATHE

SAAGUVUDU KANASINATHE...NINNOLIDE NANNA MANASU||1||


ALE BANDU KAREYUVUDU NINNOLUME ARAMANEGE

VALAGADALA RATHNA PURIGE...

ALEYIDUVA MUTHINALE KAANUVUDU NINNOLUME

OLAGUDIYA MOORTHI MAHIME.. NINNOLIDE NANNA MANASU||2||

.....................................................

Also See:

ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA

ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ|RAMA RAMA TARAKAM SONG LYRICS IN KANNADA AND ENGLISH