Mar 23, 2022

ಪ್ರೀತ್ಸೆ ಅಂತ ಪ್ರಾಣ ತಿನ್ನೊ SONG LYRICS IN KANNADA| PREETSE ANTA PRANA TINNO SONG| EXCUSE ME MOVIE SONG\KANNADA SAVIGANA

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?
ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್‍ಯಾರು?
ಇದೇನೊ ನಿನ್ನ ನೋಟ.. ಇದೇನ ಪ್ರೀತಿ ಆಟ?..
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?


ನೀನೆ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ..

ಇಳಿದೆ ಮನಸಿನ ಬೀದಿಗೆ ನೀನ್ಯಾರು?
ನಮ್ಮ ಮೊದಲನೆ ಭೇಟಿಗೆ.. ನೀನು ತಿಳಿಸುವ ವೇಳೆಗೆ..
ನಾನು ಬರುವುದು ಎಲ್ಲಿಗೆ ನೀನ್ಯಾರು?
ನನ್ನ ನೋಡೆ ಅಂತ ಹಿಂದೆ ಅಲೆದೋನು ನೀನೆ 
ನಿನ್ನ ನೊಡೊ ಆಸೆ ನನಗೆ ಬಾ ಬೇಗನೆ...||1||


ನೀನು ಕರೆಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ..
ನಾನು ಹುಡುಕಿದೆ ನಿನ್ನನೆ ನೀನ್ಯಾರು?
ಎಲ್ಲ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ..
ಎಲ್ಲು ಕಾಣದ ಚೋರನೆ ನೀನ್ಯಾರು?
ನಿನಗಾಗಿ ಕಾದೆ ನೀನೆತಕೆ ಬರದೆ ಹೋದೆ?
ನೀನಿರದೆ ನಾಳೆ ಹುಡುಗ ನನಗೆನಿದೆ?

....................................................................................................................

Also See:

ಹಚ್ಚೆವು ಕನ್ನಡದಾ ದೀಪಾ ಸಾಹಿತ್ಯ|HACHEVU KANNADA DA DEEPA SONG LYRICS IN KANNADA AND ENGLISH

BASAVANNA VACHANA(ಬಸವಣ್ಣನವರ ವಚನಗಳು)

Mar 21, 2022

ಸುಭಾಷಿತ: ನ ಗೃಹ೦ ಗೃಹ ಮಿತ್ಯಾಹು: (ಅರ್ಥ ಸಹಿತ) | NA GRAHAM GRAHAMITYAHU: SUBHASHITA WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SHLOKA)


न गृहं गृहमित्याहुः गृहिणी गृहमुच्यते

गृहं तु गृहिणी हीनं कांतारादतिरिच्यते||

 

ಗೃಹ೦ ಗೃಹ ಮಿತ್ಯಾಹು: ಗೃಹಿಣೀ ಗೃಹಮುಚ್ಯತೇ|

ಗೃಹಂ ತು ಗೃಹಿಣೀ ಹೀನಂ ಕಾಂತಾ ರಾದತಿರಿಚ್ಯತೇ||


ಅರ್ಥ: ಖಾಲಿ ಮನೆಯನ್ನು 'ಗೃಹ' ವೆಂದು ಕರೆಯಲಾಗುವುದಿಲ್ಲ. ಗೃಹಿಣಿಯೇ 'ಗೃಹ' ವೆಂದು ಕರೆಯಲ್ಪಡುತ್ತಾಳೆ. ಗೃಹಿಣಿ ಯಿಂದಲೇ ಗೃಹಕ್ಕೆ ಶೋಭೆ. ಗೃಹಿಣಿ ಇಲ್ಲದ ಮನೆಯು  ಕಾಡಿ ಗಿಂತಲೂ ಕಡೆ.

..........................................................................................................................................

Also See:

ಶ್ರೀ ರಾಮನ ಶ್ಲೊಕಗಳು (ಅರ್ಥ ಸಹಿತ) | SHLOKAS ON LORD RAMA (WITH MEANING) IN KANNADA 

ಭಗವದ್ಗೀತೆ ಶ್ಲೋಕಗಳು

Mar 19, 2022

ಶ್ರೀ ರಾಮನ ಶ್ಲೊಕಗಳು (ಅರ್ಥ ಸಹಿತ) | SHLOKAS ON LORD RAMA (WITH MEANING) IN KANNADA | kannada savigana


 1. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇಧಸೆ

ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಮಃ||

(ರಾಮನಿಗೆ, ಮಂಗಳವನ್ನು ಕೊಟ್ಟು ಆನಂದ ಪಡಿಸುವವನಿಗೆ, ಚಂದ್ರನಂತೆ ಆನಂದ ಕೊಡುವವನಿಗೆ, ಇಷ್ಟವರಗಳನ್ನು ಕೊಡುವವನಿಗೆ, ರಘುಕುಲದ ಅಧಿಪತಿಗೆ, ನನ್ನ ಪ್ರಭುವಿಗೆ, ಸೀತೆಯ ಪತಿಗೆ ನಮಸ್ಕಾರಗಳು.)


2. ಶ್ರೀರಾಮ ರಾಮ ರಾಮೇತಿ ರಮೇ ರಾಮೆ ಮನೋರಮೆ

 ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೆ||

(ವಿಷ್ಣು ಸಹಸ್ರನಾಮ ಶ್ಲೋಕದಲ್ಲಿ ಭಗವಾನ್ ಈಶ್ವರನೇ ಹೇಳುತ್ತಾನೆ:

ಸುಂದರವಾದ ಮುಖವುಳ್ಳ ಶ್ರೀ ರಾಮನ 'ರಾಮ' ಮಂತ್ರವನ್ನು ಒಮ್ಮೆ ಜಪಿಸುವುದು, ವಿಷ್ಣುವಿನ ಸಹಸ್ರನಾಮವನ್ನು ಜಪಿಸುವುದಕ್ಕೆ ಸಮನಾದುದು.)


3. ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ

ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ||

(ಸಂಕಟಗಳನ್ನು ಹೋಗಲಾಡಿಸುವವನು, ಸಕಲ ಸಮೃದ್ಧಿಯನ್ನು ಕೊಡುವವನು, ಲೋಕದ ಆನಂದದಾಯಕ ವ್ಯಕ್ತಿತ್ವವುಳ್ಳ ಶ್ರೀ ರಾಮನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ)


4.ಶ್ರೀ ರಾಘವಂ ದಶರಥಾತ್ಮಜಮಪ್ರಮೇಯಮ್

ಸೀತಾಪತಿಂ ರಘುಕುಲಾನ್ವಯ ರತ್ನ ದೀಪಂ

ಆಜಾನುಬಾಹು೦ ಅರವಿಂದ ದಳಾಯತಾಕ್ಷo

ರಾಮಂ ನಿಶಾಚರ ವಿನಾಶಕಮ್ ನಮಾಮಿ||

(ರಘು ವಂಶ ರಾಘವನನ್ನು, ದಶರಥ ಪುತ್ರ, ಅಪ್ರಮೇಯ, ಸೀತಾಪತಿ, ರಘು ಕುಲ ದೀಪಕ, ಆಜಾನುಬಾಹು, ಕಮಲದ ಎಸಳಿನಂತೆ ಕಣ್ಣುಗಳುಳ್ಳ, ನಿಶಾಚರಗಳನ್ನು(ರಾಕ್ಷಸರನ್ನು) ನಾಶ ಮಾಡುವ ಸಾಮರ್ಥ್ಯವಿರುವ ಶ್ರೀ ರಾಮನಿಗೆ ನಮಿಸುತ್ತೇನೆ.)


5. ವೈದೇಹಿ ಸಹಿತಮ್ ಸುರದ್ರುಮತಲೆ ಹೈಮೆ ಮಹಾ ಮಂಡಪೆ

ಮಧ್ಯೇ ಪುಷ್ಪಕ ಮಾಸನೆ ಮಣಿಮಯೇ ವೀರಾಸನೇ ಸುಸ್ಥಿತಮ್

ಅಗ್ರೇ ವಾಚಯತಿ ಪ್ರಭಂಜನ ಸುತೇ ತತ್ವಮ್ ಮುನಿಭ್ಯಪರಮ್

ವ್ಯಾಖ್ಯಾ0 ತಮ್ ಭರತಾದಿಭಿ: ಪರಿವೃತಮ್ ರಾಮಂ ಭಜೆ ಶ್ಯಾಮಲಂ||

(ವೈದೇಹಿ ಸಹಿತನಾಗಿ, ಕಲ್ಪಕವೃಕ್ಷದ(ದೇವದಾರು ಮರ) ಕೆಳಗೆ, ಸುವರ್ಣ ಖಚಿತವಾದ ಸಭಾಂಗಣದ ಮಧ್ಯಭಾಗದಲ್ಲಿ ಪುಷ್ಪ ಹಾಗೂ ಮಣಿ ರತ್ನ ಖಚಿತವಾದ ಸಿಂಹಾಸನದಲ್ಲಿ ವಿರಾಜಮಾನವಾಗಿರುವ, ಮುಂಭಾಗದಲ್ಲಿ ಪ್ರಭಂಜನ(ವಾಯು) ಸುತನಾದ ಹನುಮಂತ, ಮುನಿಗಳು ಅತ್ಯುನ್ನತ ತತ್ವದ ವ್ಯಾಖ್ಯಾನವನ್ನು ವಾಚಿಸಲ್ಪಡುತ್ತಿರುವ, ಭರತಾದಿಗಳಿಂದ ಸುತ್ತುವರಿಯಲ್ಪಟ್ಟ, ಶ್ಯಾಮಲ ವರ್ಣದ ಶ್ರೀ ರಾಮನನ್ನು ಪೂಜಿಸುತ್ತೇನೆ).


6.ಲೋಕಾಭಿರಾಮಂ ರಣರಂಗಧೀರಂ

ರಾಜೀವ ನೇತ್ರಂ ರಘುವಂಶನಾಥ೦।

ಕಾರುಣ್ಯರೂಪಂ ಕರುಣಾಕರಂ ತಂ

ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ ||

 

ಜನರಿಗೆ ಆನಂದವನ್ನು ಉಂಟು ಮಾಡುವ ,ಯುದ್ಧಭೂಮಿಯಲ್ಲಿ ಶೂರನಾದ,ಕಮಲದಂತಹ ಕಣ್ಣುಗಳನ್ನು ಹೊಂದಿರುವ, ರಘುಕುಲ ಶ್ರೇಷ್ಠನಾದ,ದಯಾ ಸ್ವರೂಪಿಯಾದ, ಕೃಪಾಳುವಾಗಿರುವ, ಶರಣಾರ್ಥಿಗಳನ್ನು ರಕ್ಷಿಸುವ ಶ್ರೀರಾಮ ಚಂದ್ರ ನನ್ನು ಆಶ್ರಯಿಸುತ್ತೇನೆ.

............................................................................................................................

Also See:

ಸುಭಾಷಿತ: ಯತ್ರ ನಾರ್ಯಸ್ತು ಪೂಜ್ಯಂತೆ (ಅರ್ಥ ಸಹಿತ) |YATRA NAARYASTU POOJYANTE WITH MEANING

ರಾಮ ರಾಮ ರಾಮ್ ರಾಮ್ ರಾಮ್(RAMA RAMA RAM RAM RAM LYRICS IN KANNADA)

Mar 14, 2022

ಸುಭಾಷಿತ: ಯತ್ರ ನಾರ್ಯಸ್ತು ಪೂಜ್ಯಂತೆ (ಅರ್ಥ ಸಹಿತ) |YATRA NAARYASTU POOJYANTE WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SONG)


यत्र नार्यस्तु पूज्यन्ते रमन्ते तत्र देवता: |

यत्रैतास्तु न पूज्यन्ते सर्वास्ता निष्फला  क्रिया: ||

 

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ: |

ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತಾ ನಿಷ್ಪಲಾ: ಕ್ರಿಯಾ:| |


YATRA NAARYASTU POOJYANTE

RAMANTE TATRA DEVATAAH|

YATRAITAASTU NA POOJYANTE

SARVAASTAA NISHPHALAAH KRIYAAH||

 

ಅರ್ಥ

ಎಲ್ಲಿ ನಾರಿಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಆನಂದದಿಂದ ಇರುತ್ತಾರೆ.

ಆದರೆ ಎಲ್ಲಿ ನಾರಿಯರಿಗೆ ಗೌರವ ಇರುವುದಿಲ್ಲವೋ, ಅಲ್ಲಿ ಮಾಡಿದ ಯಾಗ ,ಯಜ್ಞ, ಜಪ, ತಪ, ಹೋಮಗಳು ಎಲ್ಲವು ನಿಷ್ಪಲ ಗಳು.

............................................................................................................................

Mar 11, 2022

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಸಾಹಿತ್ಯ(ಕನ್ನಡ & ಇಂಗ್ಲಿಷ್)|INNASHTU BEKENNA HRADAYAKKE SONG LYRICS IN KANNADA & ENGLISH|ಕನ್ನಡ ಸವಿಗಾನ

 

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ

 ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ

 ರಾಮ ರಾಮ ರಾಮ ರಾಮ||

 

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ

ಕಷ್ಟಗಳ ಕೊಡಬೇಡ ಎನಲಾರೆ ರಾಮ

ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ

ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ

ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ

ರಘುರಾಮ ರಘುರಾಮ ರಘುರಾಮ ರಾಮ

ರಘುರಾಮ ರಘುರಾಮ ರಘುರಾಮ ರಾಮ||1||

 

ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ

ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ

ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ

ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ

ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ

ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ

ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ

ನನ್ನ ಹರಣಕೆ ನಿನ್ನ ಚರಣ ಕೊಡು ರಾಮ||2||

 

ಕೌಸಲ್ಯೆಯಾಗುವೆನು ಮಡಿಲಲಿರು ರಾಮ

ವೈದೇಹಿಯಾಗುವೆನು ಒಡನಾಡು ರಾಮ

ಪಾದುಕೆಯ ತಲೆಯಲಿಡು ಭರತನಾಗುವೆ ರಾಮ

ಸಹವಾಸ ಕೊಡು ಎನಗೆ ಸೌಮಿತ್ರಿ ರಾಮ

ಸುಗ್ರೀವನಾಗುವೆನು ಸ್ನೇಹ ಕೊಡು ರಾಮ

ಹನುಮನಾಗುವೆ ನಿನ್ನ ಸೇವೆ ಕೊಡು ರಾಮ

ಹನುಮನಾಗುವೆ ನಿನ್ನ ಸೇವೆ ಕೊಡು ರಾಮ

ಶಬರಿಯಾಗುವೆ ನಿನ್ನ ಭಾವ ಕೊಡು ರಾಮ

ರಘುರಾಮ ರಘುರಾಮ ರಘುರಾಮ ರಾಮ||3||

 

ಋತ ನೀನೆ ಋತು ನೀನೆ ಶ್ರುತಿ ನೀನೆ ರಾಮ

ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ

ಆರಂಭ ಅಸ್ತಿತ್ವ ಅಂತ್ಯ ನೀ ರಾಮ

ಪೂರ್ಣ ನೀ ಪ್ರಕಟ ನೀ ಆನಂದ ರಾಮ

ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ

ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ

ಗುರಿ ನೀನೆ ಗುರು ನೀನೆ ಅರಿವು ನೀ ರಾಮ

ಗುರಿ ನೀನೆ ಗುರು ನೀನೆ ಅರಿವು ನೀ ರಾಮ

ರಘುರಾಮ ರಘುರಾಮ ರಘುರಾಮ ರಾಮ

ನಗುರಾಮ ನಗರಾಮ ಜಗರಾಮ ರಾಮ||4||

.............................................................................................

Innashtu bekenna hradayakke rama

Ninnashtu nemmadiyu ellihudu rama

Rama rama rama rama ||

 

Ninnishtadantenna ittiruve rama

Nannishtadantella kottiruve rama

Kashtagala kodabeda enalaare rama

Kashta sahisuva sahane kodu nanage rama

Kashta sahisuva sahane innashtu rama

Kashta sahisuva sahane ninnashtu rama

Raghurama raghurama raghurama rama

Raghu rama raghurama raghurama rama||1||

 

Olitinede munnadeva manava kodu rama

Seletakke sigadante sthirate kodu rama

Ninnegala paapagala sonneyaagisu rama

Naalegalu punyagala haadiyaagali rama

Nanna baalige ninna hasiva kodu rama

Nanna tolige ninna kasuva kodu rama

Kannu kaledaru ninna kanasa kodu rama

Nanna haranake ninna charana kodu rama||2||

 

Kousalyeyaaguvenu madilaliru rama

Vaidehiyaaguvenu odanaadu rama

Paadukeya taleyalidu bharatanaaguve rama

Sahavaasa kodu engage soumitri rama

Sugreevanaaguvenu Sneha kodu rama

Hanumanaaguve ninna seve kodu rama

Hanumanaaguve ninna seve kodu rama

Shabariyaaguve ninna bhava kodu rama

Raghu rama raghurama raghurama rama||3||

 

Rata neene rutu neene shruthi neene rama

Mati neene gati neene dyuti neene rama

Aarambha Astitva antya nee rama

Poorna nee prakata nee Ananda rama

Hara neene hari neene brahma nee rama

Hara neene hari neene brahma nee rama

Guri neene guru neene arivu nee rama

Raghu rama raghurama raghurama rama

Nagurama nagarama jagarama rama||4||

............................................

ಹಾಡಲು ಕಲಿಯಿರಿ(CLICK HERE TO LEARN THIS SONG)

Also See:

EASY SHLOKAS(ಸರಳ ಶ್ಲೋಕಗಳು).

ತೆರೆದಿದೆ ಮನೆ ಓ ಬಾ ಅತಿಥಿ|Teredide Mane O Baa Atithi song lyrics| ಹೊಸ ಬೆಳಕು |MOVIE- HOSABELAKU| Kannada Savigana

Mar 9, 2022

ಬಸವಣ್ಣನವರ ವಚನ: ಕಳಬೇಡ ಕೊಲಬೇಡ | KALABEDA KOLABEDA |BASAVANNA|KANNADA SAVIGANA LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ|

ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ

 ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ||

........................................................

KALABEDA KOLABEDA, HUSIYA NUDIYALU BEDA

MUNIYABEDA ANYARIGE, ASAHYA PADABEDA

TANNA BANNISABEDA, IDIRA HALIYALU BEDA

IDE ANTARANGA SHUDDI, IDE BAHIRANGA SHUDDI

IDE NAMMA KOODALA SANGAMA 

DEVARANOLISUVA PARI||

...............................................................................

Also See:

LORD SHIVA(ಈಶ್ವರನ ಹಾಡು)

PURANDARA DASA(ಪುರಂದರದಾಸ).


Mar 7, 2022

ಕನ್ನಡ ಕಲಿ-ಸಂಖ್ಯೆಗಳು(೧-೧೦) | LEARN KANNADA- NUMBERS (1-10)- KANNADA SAVIGANA

 


NUMBER IN ENGLISH

Kannada

NUMBER NAME IN ENGLISH

NUMBER NAME IN KANNADA

0

0

SONNE

ಸೊನ್ನೆ

1

 

ONDU

ಒಂದು

2

ERADU

ಎರಡು

3

MOORU

ಮೂರು

4

NAALKU

ನಾಲ್ಕು

5

AIDU

ಐದು

6

AARU

ಆರು

7

ELU

ಏಳು

8

ENTU

ಎಂಟು

9

OMBHATTU

ಒಂಬತ್ತು

10

೧೦

HATTU

ಹತ್ತು



Also See:

KANNADA RHYMES(ಶಿಶುಗೀತೆಗಳು)

KANNADA KALI|ಕನ್ನಡ ಕಲಿ|COLOUR NAMES IN KANNADA - ಬಣ್ಣಗಳು