Nov 28, 2022

ಸರಳ ಸುಭಾಷಿತ -ಅನಿಚ್ಛ೦ತೋಪಿ ವಿನಯ0 LYRICS (ಮಕ್ಕಳಿಗೆ ವಿದ್ಯಾಭ್ಯಾಸ ಹೇಗೆ ಮಾಡಬೇಕು?)| SUBHASHITA-ANICCHANTOPI VINAYAM WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अनिच्छ्न्तॊपि विनयम् विद्याभ्यासॆन बालका:

भॆषजॆनॆव नैरुज्यम् प्रापणीया: प्रयत्नत:

 

ಅನಿಚ್ಛ೦ತೋಪಿ ವಿನಯಮ್ ವಿದ್ಯಾಭ್ಯಾಸೇನ ಬಾಲಕಾ:

ಭೇಷಜೇನೇವ ನೈರುಜ್ಯಮ್ ಪ್ರಾಪಣೀಯಾ: ಪ್ರಯತ್ನತ:

 

ಹೇಗೆ ಔಷಧಿಯಿಂದ ರೋಗವನ್ನು ಗುಣಪಡಿಸುತ್ತೆವೋ ಹಾಗೆಯೇ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಪ್ರಯತ್ನಪೂರ್ವಕವಾಗಿ ಸರಿಯಾದ ವಿದ್ಯೆಯನ್ನು ಕೊಡಿಸಿ ನಯ , ವಿನಯ , ನೀತಿಗಳನ್ನು ಕಲಿಸಿಕೊಡಬೇಕು.

Just like medicine cures disease, even if children don't like it, one should try hard to give proper education and teach them politeness and ethics.

............................................................................................................................

Aslo SEe:

ಸರಳ ಸುಭಾಷಿತ - ನಾಯ೦ ಪ್ರಯಾತಿ ವಿಕೃತಿ೦ (ಸುಭಾಷಿತ ರಸದ ಶ್ರೇಷ್ಠತೆ) LYRICS | SUBHASHITA NA AYAM PRAYATI WITH MEANING

Nov 22, 2022

ಸರಳ ಸುಭಾಷಿತ - ನ ವಿದ್ಯಯಾ ನೈವ ಕುಲೇನ ಗೌರವಮ್ LYRICS WITH MEANING | NA VIDYAYA NAIVA KULENA GAURAVAM

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

 विद्यया नैव कुलेन गौरवम्  जनानुरागो धनिकेषु सर्वदा |

कपालिना  मौलिधृतापि जाह्नवि प्रयाति रत्नाकरमॆव सर्वदा॥

 

ವಿದ್ಯಯಾ ನೈವ ಕುಲೇನ ಗೌರವಮ್ ಜನಾನುರಾಗೋ ಧನಿಕೇಷು ಸರ್ವದಾ।

ಕಪಾಲಿನಾ ಮೌಲಿಧೃತಾಪಿ ಜಾಹ್ನವಿ ಪ್ರಯಾತಿ ರತ್ನಾಕರಮೇವ ಸರ್ವದಾ॥

 

ಈ ಸುಭಾಷಿತದಲ್ಲಿ ಸಮಾಜದಲ್ಲಿ ಹಣಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಎನ್ನುವುದನ್ನು ಗಂಗೆಯ ಉದಾಹರಣೆಯೊಂದಿಗೆ ವಿವರಿಸಲಾಗಿದೆ.

ಒಬ್ಬ ವಿದ್ಯಾವಂತನಿಗೆ ಕುಲವಂತನಿಗೆ ಸಿಗುವ ಗೌರವಕ್ಕಿಂತ ಧನಿಕನಿಗೆ ಸಮಾಜದಲ್ಲಿ ಗೌರವ ಜಾಸ್ತಿ ದೊರಕುತ್ತದೆ. ಈಶ್ವರನು ತನ್ನ ಶಿರದಲ್ಲಿ ಗಂಗೆಯನ್ನು ಧರಿಸಿದ್ದರೂ ಗಂಗೆಯು ರತ್ನಾಕರ  (ಸಮುದ್ರ) ಉಪ್ಪು ನೀರನ್ನು ಹೊಂದಿದ್ದರೂ, ರತ್ನಗಳ  ಮೇಲಿನ ಮೋಹದಿಂದ ಶ್ರೀಮಂತನಾದ ಸಮುದ್ರವನ್ನು ಸೇರುತ್ತಾಳೆ

............................................................................................................................

Nov 9, 2022

ಸರಳ ಸುಭಾಷಿತ - ನಾಯ೦ ಪ್ರಯಾತಿ ವಿಕೃತಿ೦ (ಸುಭಾಷಿತ ರಸದ ಶ್ರೇಷ್ಠತೆ) LYRICS | SUBHASHITA NA AYAM PRAYATI WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

नायं प्रयाति विकृतिं विरसो ​: स्यात्

क्षीयते बहु जनैर्नितरां निपीत:|

जाड्यं निहन्ति रुचिमेति करोति तृप्तिम्

नूनं सुभाषितरसॊन्यरसातिशायी ||

 

ನಾಯ೦ ಪ್ರಯಾತಿ ವಿಕೃತಿ೦ ವಿರಸೋ : ಸ್ಯಾತ್

ಕ್ಷೀಯತೇ ಬಹು ಜನೈರ್ನಿತರಾ೦ ನಿಪೀತ:

ಜಾಡ್ಯ೦ ನಿಹಂತಿ ರುಚಿಮೇತಿ ಕರೋತಿ ತೃಪ್ತಿ೦

ನೂನ೦ ಸುಭಾಷಿತರಸೋನ್ಯರಸಾತಿಶಾಯೀ॥

 

ಸುಭಾಷಿತವೆನ್ನುವ ರಸವು ಇತರ ರಸಗಳ೦ತೆ ಕೆಟ್ಟು ಹೋಗುವುದಿಲ್ಲ ,ಸತ್ವವನ್ನು ಕಳೆದುಕೊಳ್ಳುವುದಿಲ್ಲ  ಹಾಗೂ ಬೇಸರವನ್ನು ಮೂಡಿಸುವುದಿಲ್ಲ. ಎಷ್ಟೇ ಜನರು  ಹೆಚ್ಚು ಹೆಚ್ಚು ಸೇವಿಸಿದಾಗಲೂ ಕ್ಷಯಿಸುವುದಿಲ್ಲ. ಇದು ಆಲಸ್ಯವನ್ನು ಹೋಗಲಾಡಿಸುತ್ತದೆ,ರುಚಿಕರವಷ್ಟೇ ಅಲ್ಲದೇ, ತೃಪ್ತಿಯನ್ನೂ ಕೊಡುತ್ತದೆ. ಸುಭಾಷಿತವೆನ್ನುವ ರಸವು ಎಲ್ಲಾ ರಸಗಳನ್ನೂ ಮೀರಿಸುತ್ತದೆ.

....................................................................................................

ALSO SEE:

ಸರಳ ಸುಭಾಷಿತ - ಪಿತಾ ರಕ್ಷತಿ ಕೌಮಾರೆ |SUBHASHITA -PITA RAKSHATI KAUMAARE WITH MEANING

Nov 4, 2022

ಸರಳ ಸುಭಾಷಿತ - ಗುಣೇಶು ಕ್ರಿಯತಾ೦ ಯತ್ನ: with lyrics and meaning | SUBHASHITA WITH MEANING: GUNESHU KRIYATAM YATNAHA

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


गुणेषु क्रियतां यत्न: किमाटोपै: प्रयोजनम्|

विक्रीयन्ते घन्टाभिर्गाव​: क्षीरवर्जिता:||

 

ಗುಣೇಶು ಕ್ರಿಯತಾ೦ ಯತ್ನ: ಕಿಮಾಟೋಪೈ: ಪ್ರಯೋಜನಮ್।

ವಿಕ್ರೀಯಂತೆ  ಘಂಟಾಭಿರ್ಗಾವ: ಕ್ಷೀರವರ್ಜಿತಾ:

 

ನಮ್ಮ ಅರ್ಹತೆ /ಯೋಗ್ಯತೆಗೆ ಸರಿಯಾದ ಕೆಲಸಗಳನ್ನು ಮಾಡಲು ಪ್ರಯತ್ನಿಸಬೇಕು ಅದರಿಂದ ಸ್ಥಾನಮಾನಗಳನ್ನು ಪಡೆಯಬೇಕು .ಆಡಂಬರ/ತೋರಿಕೆಯ ಕೆಲಸಗಳಿಂದ ಏನು ಪ್ರಯೋಜನವಿಲ್ಲ .ಹಸುಗಳನ್ನು ಅವುಗಳು ಕೊಡುವ ಹಾಲಿನ ಪ್ರಮಾಣದ ಮೇಲೆ ಮಾರಾಟ ಮಾಡುವುದೇ ವಿನಹ ಅವುಗಳ ಕೊರಳಿಗೆ ಕಟ್ಟಿದ ಘ೦ಟೆಯಿಂದ ಅಲ್ಲ

We should try to do things that are right for our merit/worthiness and get status from it. There is no use in pompous/showy work. Cows should be sold by the amount of milk they give and not by the bell tied around their neck.

.............................................................................................................................................

Also See:

ಸರಳ ಸುಭಾಷಿತ - ವ್ಯಾಯಾಮಾತ್ ಲಭತೇ ಸ್ವಾಸ್ಥ್ಯ೦ (ವ್ಯಾಯಾಮದ ಮಹತ್ವ) | SUBHASHITA ON IMPORTANCE OF HEALTH


Nov 2, 2022

ಕನಕನ ಕಂಡ ಕಂಗಳಲೆನ್ನ ಕಾಣಬಾರದೇನು song lyrics in kannada |KANAKANA KANDA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಕನಕನ ಕಂಡ ಕಂಗಳಲೆನ್ನ ಕಾಣಬಾರದೇನು ಸ್ವಾಮಿ ಕಾಣಬಾರದೇನು

ಕರುಣಾಪೂರಿತ ನೋಟದೊಳೆನ್ನ ನೋಡಬಾರದೇನು ಸ್ವಾಮಿ ನೋಡಬಾರದೇನು||

 

ಕೊಳನೂದಿದ ತುಟಿಯಲಿ ಕಿರುನಗೆ ತೇಲಬಾರದೇನೋ ಕೃಷ್ಣ ತೇಲಬಾರದೇನೋ

ಅರಳುವ ಕಮಲವ ಹೋಲುವ ನಗೆಯ ತೋರಬಾರದೇನು ಕೃಷ್ಣ ತೋರಬಾರದೇನು||1||

 

ಗಿರಿಯನು ಎತ್ತಿದ ಕರದಲಿ ನೀನು ನನ್ನ ಹರಸಬಾರದೇ ತಂದೆ ನನ್ನ ಹರಸಬಾರದೇ

ಅಭಯ ಹಸ್ತವ  ತೋರಿಸಿ ಇಂದು ಭಯವಾ ಕಳೆಯಬಾರದೇ ಸ್ವಾಮಿ ಭಯವ ಕಳೆಯಬಾರದೇ||2||

 

ಹಾವನು ತುಳಿದ ಪಾದಗಳನ್ನು ಶಿರದಲಿ ಇರಿಸಬಾರದೆ ನನ್ನ ಶಿರದಲಿ ಇರಿಸಬಾರದೇ

ನಿನ್ನ ಪಾದಗಳ ಹೊತ್ತು ತಲೆಯಲಿ ಧನ್ಯನಾಗಬಾರದೇ ಕೃಷ್ಣ ಧನ್ಯನಾಗಬಾರದೇ||3||

...................................................................................................

Also See:

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|