ಹಾಡಲು ಕಲಿಯಿರಿ(CLICK HERE TO LEARN THIS SONG)
ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ ||
ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ ||
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು, ಸಿದ್ದರು ಹರಸಿಯ ಸಿರಿನಾಡು ||1||
ವೀರಮದಕರಿ ಆಳುತಲಿರಲು ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ ||2||
ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು ||3||
ಹೆಣ್ಣು : ಓ... ಸರದಾರ....
ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರ ಗಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು, ಯಾರವಳು, ವೀರ ವನಿತೆ ಆ ಓಬವ್ವ,…….
ದುರ್ಗವು ಮರೆಯದ ಓಬವ್ವ ||4||
ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ್ತಾ
ವೈರಿ ರುಂಡ ಚೆಂಡಾಡಿದಳು ರಕ್ತದ ಕೋಡಿ ಹರಿಸಿದಳು ||5||
ಸತಿಯ ಹುಡುಕುತ ಕಾವಲಿನವನು, ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು ಹೆಣದ ರಾಶಿಯ ಬಳಿಯ ಕಂಡನು
ರಣಚೆಂಡಿ ಅವತಾರವನು ಕೋಟೆ ಸಲುಹಿದ ತಾಯಿಯನು ||
ಹೆಣ್ಣು : ಹೈದರಾಲಿ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ, ಹೋಗಿ ರಣಕಹಳೆಯನು ಊದಿ.
ರಣಕಹಳೆಯನು ಊದುತಲಿರಲು ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಷೇಶವಾಗಲು ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ, ಚಿತ್ರದುರ್ಗದ ಓಬವ್ವ||
.........................................................................................................................................................