ನನ್ನದು ಈ ಕನ್ನಡನಾಡು ನನ್ನದು |ದ. ರಾ. ಬೇಂದ್ರೆ | song lyrics | NANNADU EE KANNADA NAADU SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ದ. ರಾ. ಬೇಂದ್ರೆ

 

ನನ್ನದು ಈ ಕನ್ನಡನಾಡು ನನ್ನದು

ಅವರಿವರದೆಂದು ಎಂದೂ ಎನ್ನದು

ಅದು ನನ್ನದೆಂದು ಹಾಗೇ ನಿನ್ನದು || ನನ್ನದು ಈ ಕನ್ನಡನಾಡು||

 

ಸರ್ವಾರ್ಥ ಸಿದ್ಧಿ ಕೇವಲದ ಬುದ್ದಿ

ಅಂತರ್ಯ ಶುದ್ದಿ ಮೈಗೂ ಮುಟ್ಟಿದೆ

ದಿಟವಾದ ನಿಕರ ತಪವಾಗಿ ಪ್ರಕರ

ಕೈಲಾಸ ಶಿಖರವನ್ನು ಮೆಟ್ಟಿದೆ || ನನ್ನದು ಈ ಕನ್ನಡನಾಡು||

 

ರಸದೊಳಗೆ ರಸವು ಹಲಬಣ್ಣ ಹೊಸವು

ಬೀಜವನೆ ತುಷವು ತಾಯಾಗಿ ಕಾಯ್ದಿದೆ

ಆತ್ರೇಯ ನೇತ್ರ ಚಾತುರ್ಯ ಸೂತ್ರ

ಘಟಪಟದ ಗಾತ್ರ ಹೊಳೆ ಸುಳಿಯನೈದಿರೆ || ನನ್ನದು ಈ ಕನ್ನಡನಾಡು||

 

ಇಂದಂದಿನದಲ್ಲಿ ಹಾಡು ನಾಡಿದೆ ನಾ ಕನ್ನಡ ನಾಡು

ಆ ಕನ್ನಡಾ ನಾಡು ನನ್ನದು ನನ್ನದು ಈ ಕನ್ನಡ ನಾಡು || ನನ್ನದು ಈ ಕನ್ನಡನಾಡು||

.................................................................................................. 

ಕನ್ನಡ ರಾಜ್ಯೋತ್ಸವ ಗೀತೆಗಳು

No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...