ಹಾಡಲು ಕಲಿಯಿರಿ(CLICK HERE TO LEARN THIS SONG)
ಯಾದವ ನೀ ಬಾ ಯದುಕುಲ
ನಂದನ
ಮಾಧವ ಮಧುಸೂದನ ಬಾರೋ |
ಸೋದರಮಾವನ ಮಧುರೆಲಿ
ಮಡುಹಿದ
ಯಶೋದೆ ಕಂದ ನೀ ಬಾರೋ ||
ಕಣ ಕಾಲಂದಿಗೆ
ಘುಲುಘುಲು ಎನುತಲಿ
ಝಣ ಝಣ ಎನುತಿಹ
ನಾದಗಳು|
ಚಿಣಿಕೋಲು ಚೆಂಡು
ಬುಗುರಿಯನಾಡುತ
ಸಣ್ಣವರೊಡಗೂಡಿ ನೀ
ಬಾರೋ |1||
ಶಂಖ ಚಕ್ರವು ಕೈಯಲ್ಲಿ
ಹೊಳೆಯುತ
ಬಿಂಕದ ಗೋವಳ ನೀ ಬಾರೋ |
ಅಕಳಂಕ ಮಹಿಮನೆ
ಆದಿನಾರಾಯಣ
ಬೇಕೆಂಬ ಭಕುತರ ಬಳಿ
ಬಾರೋ ||2||
ಖಗವಾಹನನೇ
ಬಗೆಬಗೆರೂಪನೆ
ನಗೆಮೊಗದರಸನೆ ನೀ
ಬಾರೋ |
ಜಗದೊಳು ನಿನ್ನಯ
ಮಹಿಮೆಯ ಪೊಗಳುವೆ
ಪುರಂದರ ವಿಠ್ಠಲ ನೀ
ಬಾರೋ ||3||
..................................................................................................
No comments:
Post a Comment