ಎಚ್ಚರದಲಿ ನಡೆ ಮನವೇ
ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ
ಅನ್ನದಾನವ ಮಾಡೋದಿಲ್ಲಿ ಮೃ |
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ||
ಅನ್ಯಾಯ ಮಾಡುವುದಿಲ್ಲಿ ನಿನ್ನ |
ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ||
ಧರ್ಮವ ಮಾಡುವುದಿಲ್ಲಿ ಸು |
ಧರ್ಮ ಸಭೆಯ ತೋರುವರು ಮುಂದಲ್ಲಿ ||
ಕರ್ಮ ಯೋಚನೆಗಳು ಇಲ್ಲಿ ನಿನಗೆ|
ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||||
ಹೆಣ್ಣು ಹೊನ್ನನು ಬಯಸೋದಿಲ್ಲಿ ನಿನ್ನ |
ಕಣ್ಣಿಗೆ ಸುಣ್ಣವ ತುಂಬುವರಲ್ಲಿ ||
ಘನ ಸುಜ್ನಾನವು ಇಲ್ಲಿ ಪ್ರ |
ಸನ್ನ ಪುರಂದರ ವಿಠಲ ಪಾಲಿಪನಲ್ಲಿ |||
........................................................................................................................
No comments:
Post a Comment