ಕನ್ನಡ ನಾಡಿನ ವೀರರಮಣಿಯ | ದುರ್ಗವು ಮರೆಯದ ಓಬವ್ವ SONG LYRICS IN KANNADA | KANNADA NAADINA VEERA RAMANIYA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ

 ಚರಿತೆಯ ನಾನು ಹಾಡುವೆ ||

ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ

 ಚರಿತೆಯ ನಾನು ಹಾಡುವೆ ||

 

 ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

 ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

 ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ

 ಪುಣ್ಯ ಭೂಮಿಯು ಬೀಡು, ಸಿದ್ದರು ಹರಸಿಯ ಸಿರಿನಾಡು ||1||

 

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುದ್ದಕೆ ಬರಲು

ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು

ವೈರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ ||2||

 

ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು

 ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು ||3||

 

ಹೆಣ್ಣು : ... ಸರದಾರ....

 

 ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರ ಗಚ್ಚೆಯ ಹಾಕಿ ನಿಂತಳು

 ದುರ್ಗಿಯನ್ನು ಮನದಲ್ಲಿ ನೆನೆದಳು ಕಾಳಿಯಂತೆ ಬಲಿಗಾಗಿ ಕಾದಳು

 ಯಾರವಳು, ಯಾರವಳು, ವೀರ ವನಿತೆ ಓಬವ್ವ,…….

 ದುರ್ಗವು ಮರೆಯದ ಓಬವ್ವ ||4||

 

ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ

ಸತ್ತವನನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ್ತಾ

ವೈರಿ ರುಂಡ ಚೆಂಡಾಡಿದಳು ರಕ್ತದ ಕೋಡಿ ಹರಿಸಿದಳು ||5||

 

ಸತಿಯ ಹುಡುಕುತ ಕಾವಲಿನವನು, ಗುಪ್ತದ್ವಾರದ ಬಳಿಗೆ ಬಂದನು

ಮಾತು ಹೊರಡದೆ ಬೆಚ್ಚಿ ನಿಂತನು ಹೆಣದ ರಾಶಿಯ ಬಳಿಯ ಕಂಡನು

ರಣಚೆಂಡಿ ಅವತಾರವನು ಕೋಟೆ ಸಲುಹಿದ ತಾಯಿಯನು ||

 

 ಹೆಣ್ಣು : ಹೈದರಾಲಿ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ, ಹೋಗಿ ರಣಕಹಳೆಯನು ಊದಿ.

 

ರಣಕಹಳೆಯನು ಊದುತಲಿರಲು ಸಾಗರದಂತೆ ಸೈನ್ಯ ನುಗ್ಗಲು

 ವೈರಿ ಪಡೆಯು ನಿಷೇಶವಾಗಲು ಕಾಳಗದಲ್ಲಿ ಜಯವನು ತರಲು

 ಅಮರಳಾದಳು ಓಬವ್ವ, ಚಿತ್ರದುರ್ಗದ ಓಬವ್ವ||

.........................................................................................................................................................

No comments:

Post a Comment

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)   ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭೋಲೇ ನಮ: ಶಿವಾಯ್ ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭ...