सरस्वति नमस्तुभ्यम्
वरदे कामरूपिणि |
विद्यारंभं करिष्यामि
सिद्दिर्भवतु मे सदा ||
ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ॥
ಪದಚ್ಛೇದ
सरस्वति नम: तुभ्यम् वरदे, काम-रुपिणि,
विद्या-आरम्भं करिष्यामि सिद्दि: भवतु मे सदा |
ಅನ್ವಯ
सरस्वति, वरदे, काम-रुपिणि,तुभ्यम् नम: | विद्या-आरम्भं करिष्यामि | मे सदा सिद्दि: भवतु |
सरस्वति = ಹೇ ಸರಸ್ವತಿ
वरदे = ವರಗಳನ್ನು ಕೊಡುವವಳೇ
काम-रुपिणि= ಇಷ್ಟಬಂದಂತಹ ರೂಪಗಳನ್ನು ಧರಿಸುವವಳೇ
तुभ्यम् = ನಿನಗೆ
नम: =ನಮಸ್ಕಾರ
विद्या-आरम्भं =ವಿದ್ಯೆ ಕಲಿಯುವ ಆರಂಭ
करिष्यामि =ಮಾಡಲಿದ್ದೇನೆ
मे =ನನಗೆ
सदा =ಯಾವಾಗಲೂ
सिद्दि: = ಯಶಸ್ಸು
भवतु = ಸಿಗಲಿ/ಆಗಲಿ
ಹೇ ಸರಸ್ವತಿ, ಬೇಡಿದ ವರಗಳನ್ನು ಕೊಡುವವಳೇ, ಇಷ್ಟಬಂದ ರೂಪಗಳನ್ನು ಧರಿಸುವವಳೇ, ನಿನಗೆ ನಮಸ್ಕಾರ.
ವಿದ್ಯೆಯನ್ನು ಕಲಿಯಲು ಪ್ರಾರಂಭಿಸುತ್ತಿರುವ ನನಗೆ ಯಾವಾಗಲೂ ಯಶಸ್ಸು ಸಿಗಲಿ ಎಂದು ಆಶೀರ್ವದಿಸು.
..........................................................................................................................................................
No comments:
Post a Comment