ಹಾಡಲು ಕಲಿಯಿರಿ(CLICK HERE TO LEARN THIS SONG)
ವಂದೇ ಓಂಕಾರ ಚಾಮರ ಕರ್ಣನೇ ಶಂಕರ ಸುತ ಶರಣು ವಿನಾಯಕ
ಮಂಗಳ ವರ ಶರಣು ।।
ಮಧೂರ ಗಣಪತಿ ಶರವು ಗಣಪತಿ ಕುಂಭಾಶಿ ಗಣಪತಿ ಶರಣು ।
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ । ಗೋಕರ್ಣ ಗಣಪತಿ ಶರಣು ।।
ವಿಕಟನೆ ವಿಮಲನೆ ಏಕದಂತನೆ ಶುಭವರ್ಣ ಗೌರಿ ಸುತನೆ ।
ವಿಕಟನೆ ವಿಮಲನೆ ಏಕದಂತನೆ ಶುಭವರ್ಣ ಗೌರಿ ಸುತನೆ ।
ನೀನಲ್ಲದೆನಗಾರು ಸಖರಿಲ್ಲವೋ ಬಾಂಧವರಿಲ್ಲವೋ ಕಾಯುವರಿಲ್ಲವೋ
ಮಧೂರ ಗಣಪತಿ ಶರವು ಗಣಪತಿ ಕುಂಭಾಶಿ ಗಣಪತಿ ಶರಣು ।
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ । ಗೋಕರ್ಣ ಗಣಪತಿ ಶರಣು ।। 1||
ಸುಮುಖನೆ ಕಪಿಲನೆ ಧೂಮ್ರವರ್ಣನೆ ಗಣನಾಥ ನಿನಗೆ ವಂದನೆ ।
ಸುಮುಖನೆ ಕಪಿಲನೆ ಧೂಮ್ರವರ್ಣನೆ ಗಣನಾಥ ನಿನಗೆ ವಂದನೆ ।
ಎಂದೆಂದೂ ನಿನ್ನನು ಸ್ತುತಿ ಮಾಡುವೆ ಹಾಡಿ ಕೊಂಡಾಡುವೆ ಪೂಜೆ ವ್ರತ ಮಾಡುವೆ
ಮಧೂರ ಗಣಪತಿ ಶರವು ಗಣಪತಿ ಕುಂಭಾಶಿ ಗಣಪತಿ ಶರಣು ।
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ । ಗೋಕರ್ಣ ಗಣಪತಿ ಶರಣು ।। 2||
……………………………………………………………………………………………………………
No comments:
Post a Comment